ಪ್ರಧಾನಿ ಹವಾ ಜಿಲ್ಲೆಯಲ್ಲಿ ಬೀಸಲ್ಲ: ಸಂಸದ

7

ಪ್ರಧಾನಿ ಹವಾ ಜಿಲ್ಲೆಯಲ್ಲಿ ಬೀಸಲ್ಲ: ಸಂಸದ

Published:
Updated:

ಯಳಂದೂರು: ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಗ್ರಾಮಕ್ಕೆ ಬಂದು ಜನರಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಅವರು ಎಷ್ಟೇ ಕೂಗಾಡಿದರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.

ಅವರು ಗಂಗವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಗುರುವಾರ ಮತಯಾಚನೆ ಮಾಡಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದೆ ಮೌಢ್ಯವನ್ನು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೇಲೆ ಚಾಮರಾಜನಗರಕ್ಕೆ 13 ಬಾರಿ ಭೇಟಿ ನೀಡಿದ್ದಾರೆ. ಇದರಲ್ಲಿ ಜಿಲ್ಲಾ ಕೇಂದ್ರಕ್ಕೆ 7 ಬಾರಿ ಭೇಟಿ ನೀಡುವ ಮೂಲಕ ಈ ಕಳಂಕವನ್ನು ಕಿತ್ತೊಗೆದಿದ್ದಾರೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲಾಗಿದೆ. 270 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ತಂದು ಇಲ್ಲಿನ ನೀರಿನ ಬವಣೆಯನ್ನು ನೀಗಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್.ಜಯಣ್ಣ ರಾಜ್ಯ ಸರ್ಕಾರದಿಂದ ನೂರಾರು ಕೋಟಿ ವಿಶೇಷ ಅನುದಾನವನ್ನು ತಂದಿದ್ದಾರೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಲಿಂಕ್ ರಸ್ತೆ ನಿರ್ಮಾಣ, ಇಲ್ಲಿ ಮನೆ ಕಳೆದುಕೊಂಡವರಿಗೆ ಆಶ್ರಯ ಬಡಾವಣೆಯಲ್ಲಿ ಖಾಲಿ ನಿವೇಶನ ನೀಡಿದ್ದಾರೆ. ಇಂತಹ ಉದಾಹರಣೆ ಎಲ್ಲೂ ಇಲ್ಲ. ಅಂಬೇಡ್ಕರ್, ಬಾಬುಜಗಜೀವನರಾಂ, ಬಸವ ಭವನಗಳ ನಿರ್ಮಾಣಕ್ಕೂ ಹೆಚ್ಚಿನ ಅನುದಾನ ಹಾಕಲಾಗಿದೆ. ಪರಿಶಿಷ್ಟ ಜಾತಿ, ವರ್ಗಗಳ ಬಡಾವಣೆಗಳ ಪ್ರತಿಯೊಂದು ಸಮಸ್ಯೆಗಳನ್ನೂ ನೀಗಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ತನ್ನ ತತ್ವಸಿದ್ಧಾಂತಗಳಿಗೆ ಕಟಿಬದ್ಧವಾಗಿ ನಡೆಯುತ್ತಿದೆ. ಹಿಂದೆ ನೀಡಿದ್ದ ಚುನಾವಣಾ ಭರವಸೆಗಳಲ್ಲಿ ಶೇ. 99 ರಷ್ಟು ಪೂರ್ಣಗೊಳಿಸಲಾಗಿದೆ. ಆಡಳಿತ ಪಾರದರ್ಶಕವಾಗಿದೆ. ಈ ಮಾನದಂಡಗಳೇ ಪಕ್ಷದ ಗೆಲುವಿಗೆ ಕಾರಣವಾಗಲಿದೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಎ.ಆರ್. ಕೃಷ್ಣಮೂರ್ತಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು ಹಾಲಿ ಶಾಸಕ ಎಸ್. ಜಯಣ್ಣ ಮಾಜಿ ಶಾಸಕ ಎಸ್. ಬಾಲರಾಜು ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಿನಕಹಳ್ಳಿ ರಾಚಯ್ಯ, ಡಿ.ಎನ್. ನಟರಾಜು ಪಕ್ಷದ ಜೊತೆಯಲ್ಲಿದ್ದಾರೆ. ಎಲ್ಲರೂ ಪಕ್ಷದ ಅಭ್ಯರ್ಥಿಗೆ ಮತಹಾಕಬೇಕೆಂದು ಮನವಿ ಮಾಡಿದರು.

ಪಕ್ಷದ ಡಿ.ಎನ್. ನಟರಾಜು, ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ. ಯೋಗೇಶ್ ಸದಸ್ಯ ಕೆ.ಪಿ ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಯ್ಯ ಸದಸ್ಯ ವೆಂಕಟೇಶ್ ಪ.ಪಂ ಸದಸ್ಯ ವೈ.ಎನ್. ಉಮಾಶಂಕರ, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೆರೆದಾಸ್, ಶಿಡ್ಲಘಟ್ಟ ಮಹಾದೇವ, ಕೃಷ್ಣಾಪುರ ದೇವರಾಜು, ಎಚ್.ವಿ. ಚಂದ್ರು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಿಕ್ಕಮಾದಯ್ಯ, ಡಿ.ಪಿ. ಪ್ರಕಾಶ್, ಸಿದ್ದಲಿಂಗಸ್ವಾಮಿ, ಪರಶಿವಮೂರ್ತಿ, ಕೆಸ್ತೂರು ಸಿದ್ದರಾಜು, ಆನಂದ, ವಜ್ರಮುನಿ, ಬಂಗಾರು, ವಿನೋದ್‌ ಇತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry