ಶನಿವಾರ, ಮೇ 15, 2021
26 °C

ಮಿಲ್ಕ್‌ಶೇಕ್‌: ಹಾಲು ಹಣ್ಣು ಕುಣಿದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಲ್ಕ್‌ಶೇಕ್‌: ಹಾಲು ಹಣ್ಣು ಕುಣಿದಾಗ...

ಸಪೋಟ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು: ಸಪೋಟ ದೊಡ್ಡ ಗಾತ್ರದ್ದು – 3, ಗೋಡಂಬಿ –  10ರಿಂದ15, ತಣ್ಣನೆಯ ಹಾಲು – 1ಕಪ್, ಜೇನುತುಪ್ಪ – 3ಟೀ ಚಮಚ, ಐಸ್ ಕ್ಯೂಬ್ – ಸ್ವಲ್ಪ

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಸಿಪ್ಪೆ ತೆಗೆದು ಕತ್ತರಿಸಿಕೊಂಡ ಸಪೋಟ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ, ಜೇನುತುಪ್ಪ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಜೂಸ್ ಗ್ಲಾಸಿನಲ್ಲಿ ಐಸ್ ಕ್ಯೂಬ್ ಹಾಕಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ. ಅಲಂಕರಿಸಲು ಚಿಕ್ಕದಾಗಿ ಕತ್ತರಿಸಿದ ಗೋಡಂಬಿ ತುಂಡುಗಳನ್ನು ಹಾಕಿ. ರುಚಿಯಾದ ಆರೋಗ್ಯಕರವಾದ ಸಪೋಟ ಮಿಲ್ಕ್‌ಶೇಕ್‌ ಮಾಡಿ ಸವಿಯಿರಿ.

*

ಮಾವಿನಹಣ್ಣಿನ ಮಿಲ್ಕ್ ಶೇಕ್ 

ಬೇಕಾಗುವ ಸಾಮಗ್ರಿಗಳು: ಕತ್ತರಿಸಿಕೊಂಡ ಮಾವಿನಹಣ್ಣು – 1ಕಪ್‌, ತಣ್ಣನೆಯ ಹಾಲು – 1/2ಕಪ್‌, ವೆನಿಲ್ಲಾ ಐಸ್‌ಕ್ರೀಂ – 2ಸ್ಕೂಪ್‌, ಮ್ಯಾಂಗೋ ಐಸ್‌ಕ್ರೀಂ – 1ಸ್ಕೂಪ್, ಸಕ್ಕರೆ – 2ಟೀ ಚಮಚ, ಕತ್ತರಿಸಿಕೊಂಡ ಬಾದಾಮಿ – ಸ್ವಲ್ಪ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ – ಸ್ವಲ್ಪ

ತಯಾರಿಸುವ ವಿಧಾನ: ಒಂದು ಮಿಕ್ಸಿಯಲ್ಲಿ ಕತ್ತರಿಸಿಕೊಂಡ ಮಾವಿನಹಣ್ಣು, ತಣ್ಣನೆಯ ಹಾಲು, ವೆನಿಲ್ಲಾ ಮತ್ತು ಮ್ಯಾಂಗೋ ಐಸ್‌ಕ್ರೀಂ ಹಾಕಿ ರುಬ್ಬಿಕೊಳ್ಳಿ. ನಂತರ ಸರ್ವಿಂಗ್ ಬೌಲ್‌ಗೆ ಹಾಕಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾದಿಂದ ಅಲಂಕರಿಸಿ. ರುಚಿಯಾದ ಮ್ಯಾಂಗೋ ಮಿಲ್ಕ್‌ಶೇಕ್‌ ತಯಾರಿಸಿ ಸವಿಯಿರಿ.

*ಕರಬೂಜದ ಹಣ್ಣಿನ ಮಿಲ್ಕ್‌ಶೇಕ್‌

ಬೇಕಾಗುವ ಸಾಮಗ್ರಿಗಳು: ಕರಬೂಜದ ಹಣ್ಣು – 1, ಹಾಲು – 1ಕಪ್‌, ಜೇನುತುಪ್ಪ – 2ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಖರ್ಜೂರ – ಸ್ವಲ್ಪ, ಚಿಕ್ಕದಾಗಿ ಕತ್ತರಿಸಿದ ಅಂಜೂರ – ಸ್ವಲ್ಪ

ತಯಾರಿಸುವ ವಿಧಾನ: ಅಂಜೂರ ಮತ್ತು ಖರ್ಜೂರವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಕರಬೂಜಹಣ್ಣು ಮತ್ತು ಜೇನುತುಪ್ಪವನ್ನು ಹಾಕಿ ಅದರೊಂದಿಗೆ ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಹಾಲನ್ನು ಹಾಕಿ ಇನ್ನೊಮ್ಮೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಗ್ಲಾಸ್‌ಗಳಿಗೆ ಹಾಕಿ ರುಚಿಯಾದ ಮತ್ತು ಸಕ್ಕರೆ–ಬೆಲ್ಲವನ್ನು ಸೇರಿಸದ ಕರಬೂಜಹಣ್ಣಿನ ಮಿಲ್ಕ್‌ಶೇಕ್‌ ಮಾಡಿ ಸವಿಯಿರಿ.

*ಪಪ್ಪಾಯಿಹಣ್ಣಿನ ಮಿಲ್ಕ್‌ಶೇಕ್‌ 

ಬೇಕಾಗುವ ಸಾಮಗ್ರಿಗಳು: ಪಪ್ಪಾಯಿಹಣ್ಣು –1ಕಪ್, ತಣ್ಣನೆಯ ಹಾಲು – 1ಕಪ್, ಏಲಕ್ಕಿ ಪುಡಿ – 1/4ಟೀ ಚಮಚ, ಸಕ್ಕರೆ ಸಿಹಿ – ಅಗತ್ಯವಿದ್ದಷ್ಟು, ಐಸ್‌ಕ್ಯೂಬ್‌ –ಸ್ವಲ್ಪ, ಪಿಸ್ತಾ – ಸ್ವಲ್ಪ

ತಯಾರಿಸುವ ವಿಧಾನ: ಪಪ್ಪಾಯಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಮಿಕ್ಸಿಯಲ್ಲಿ ಪಪ್ಪಾಯಿ, ಹಾಲು, ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಜ್ಯೂಸ್ ಗ್ಲಾಸಿಗೆ ಐಸ್‌ಕ್ಯೂಬ್‌ ಹಾಕಿ ತಯಾರಿಸಿ ಕೊಂಡ ಮಿಲ್ಕ್‌ಶೇಕ್‌ ಹಾಕಿ. ಕತ್ತರಿಸಿದ ಪಿಸ್ತಾ ಚೂರುಗಳಿಂದ ಅಲಂಕರಿಸಿ.

*ಬಾಳೆಹಣ್ಣು–ಖರ್ಜೂರದ ಮಿಲ್ಕ್‌ಶೇಕ್‌

ಬೇಕಾಗುವ ಸಾಮಗ್ರಿಗಳು:
ಖರ್ಜೂರ – 10, ಬಾಳೆಹಣ್ಣು – 3, ಸಕ್ಕರೆ – 4ಟೀ ಚಮಚ, ಐಸ್‌ಕ್ಯೂಬ್ – ಸ್ವಲ್ಪ, ಗಟ್ಟಿಹಾಲು – 1/2ಲೀಟರ್

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಬೀಜ ತೆಗೆದ ಖರ್ಜೂರ, ಸಕ್ಕರೆ ಮತ್ತು ಸ್ವಲ್ಪ ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಳೆಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ. ಐಸ್‌ಕ್ಯೂಬ್ ಸೇರಿಸಿ ಒಂದು ಸಲ ಮಿಕ್ಸಿಯಲ್ಲಿ ತಿರುಗಿಸಿ. ಉಳಿಸಿದ ಹಾಲು ಸೇರಿಸಿ ಮಿಶ್ರಣ ಮಾಡಿ. ಗ್ಲಾಸ್‌ನಲ್ಲಿ ಹಾಕಿ ರುಚಿಯಾದ ಮತ್ತು ಆರೋಗ್ಯಕರವಾದ ಮಿಲ್ಕ್‌ಶೇಕ್‌ ಸವಿಯಿರಿ. ಡಯೆಟ್ ಮಾಡುವವರಿಗೆ ತುಂಬ ಶಕ್ತಿಯುತ ಆಹಾರ. ಸಕ್ಕರೆ ಹಾಕದಿದ್ದರೂ ಚೆನ್ನಾಗಿರುತ್ತದೆ.

*-ವೇದಾವತಿ ಎಚ್. ಎಸ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.