‘ಮೀಸಲಾತಿ ಹಿಂಬಡ್ತಿ; ಪ್ರಜಾಪ್ರಭುತ್ವದ ಕಗ್ಗೊಲೆ’

7

‘ಮೀಸಲಾತಿ ಹಿಂಬಡ್ತಿ; ಪ್ರಜಾಪ್ರಭುತ್ವದ ಕಗ್ಗೊಲೆ’

Published:
Updated:

ಸಿಂದಗಿ: ‘ಮೀಸಲಾತಿ ಹಿಂಬಡ್ತಿ ಆದೇಶ ಸಮಸ್ತ ದಲಿತರಿಗೆ ಇದೊಂದು ಕರಾಳ ಶಾಸನ. ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಪುರಸಭೆ ಹಿರಿಯ ಸದಸ್ಯ, ದಲಿತ ಮುಖಂಡ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ವಿವಿಧ ದಲಿತ ಸಂಘಟನೆಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಹಿಂಬಡ್ತಿ ಕಾರಣಕ್ಕೇ ಚಿತ್ರದುರ್ಗದ ಎನ್.ಲಿಂಗರಾಜು ಹೃದಯಾಘಾತದಿಂದ ಮೃತರಾಗಿದ್ದಾರೆ. ಅಲ್ಲದೇ ಮುಂಡಗೋಡ ಪಟ್ಟಣದ ಜಗದೀಶ ಚಲವಾದಿ ಮನನೊಂದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂಬಡ್ತಿ ಆದೇಶ ಹೀಗೆ ಮುಂದುವರೆದರೆ ದಲಿತರ ಸರಣಿ ಸಾವುಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೂಡಲೇ ಈ ಮೀಸಲಾತಿ ಹಿಂಬಡ್ತಿ ಆದೇಶ ಹಿಂದೆ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತ ಸಂಘಟನೆಗಳು ಬೀದಿಗಿಳಿದು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ದಸಂಸ(ನಾಗವಾರ ಬಣ) ಸಂಚಾಲಕ ಚಂದ್ರಕಾಂತ ಸಿಂಗೆ, ದಸಂಸ(ಸಾಗರ ಬಣ)

ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ದಸಂಸ (ಮಾರಪ್ಪ ಬಣ) ಬಸವರಾಜ ಕೂಚಬಾಳ ಹಾಗೂ ರಿಪಬ್ಲಿಕ್ ಪಾರ್ಟಿ ಪ್ರಮುಖ ಸಂತೋಷ ಕಾಂಬಳೆ, ಅಂಬೇಡ್ಕರ್ ಸೇನೆ ಸಂಚಾಲಕ ಧರ್ಮರಾಜ ಎಂಟಮಾನ, ಪರುಶರಾಮ ಕಾಂಬಳೆ, ಶರಣಬಸು ಸಿಂಧೆ, ಸಂತೋಷ ಮಣಿಗಿರಿ,ಗಾಲೀಬ ಎಂಟಮಾನ, ಮಂಜುನಾಥ ಎಂಟಮಾನ, ರವಿ ಹೊಳಿ, ಪ್ರವೀಣ ಆಲಹಳ್ಳಿ, ಶ್ರೀಮಂತ ಚೌರ, ರಮೇಶ ನಾಟೀಕಾರ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry