ಶುಕ್ರವಾರ, ಫೆಬ್ರವರಿ 26, 2021
30 °C
ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಬ್ಯಾಡ್ಮಿಂಟನ್‌: ಸೆಮಿಫೈನಲ್‌ನಲ್ಲಿ ಸಾಯಿಪ್ರಣೀತ್‌ಗೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಡ್ಮಿಂಟನ್‌: ಸೆಮಿಫೈನಲ್‌ನಲ್ಲಿ ಸಾಯಿಪ್ರಣೀತ್‌ಗೆ ಸೋಲು

ಆಕ್ಲಂಡ್‌: ಭಾರತದ ಬಿ. ಸಾಯಿಪ್ರಣೀತ್‌ ಅವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸೋತರು. ಇದರಿಂದ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೋರಾಟ ಅಂತ್ಯ ಕಂಡಿತು.

ಶನಿವಾರ ಒಂದು ಗಂಟೆಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಇಂಡೊನೇಷ್ಯಾದ ಜೋನಾಥನ್‌ ಕ್ರಿಸ್ಟಿ, ಸಾಯಿಪ್ರಣೀತ್‌ ಅವರನ್ನು 14–21, 21–19, 21–8ರಿಂದ ಮಣಿಸಿದರು.

ಮೂರನೇ ಶ್ರೇಯಾಂಕಿತ ಸಾಯಿಪ್ರಣೀತ್‌ ಅವರು ಉತ್ತಮ ಆರಂಭ ಮಾಡಿದರು. ಆದರೆ ರೋಚಕ ಹೋರಾಟದಿಂದ ಕೂಡಿದ್ದ ಎರಡನೇ ಗೇಮ್‌ನಲ್ಲಿ ಬಿರುಸಿನ ಆಟಕ್ಕಿಳಿದ ಕ್ರಿಸ್ಟಿ ಅವರು ಮೇಲುಗೈ ಸಾಧಿಸಿದರು. ಮೂರನೇ ಗೇಮ್‌ನ ಆರಂಭದಿಂದಲೂ ಹಲವು ತಪ್ಪುಗಳಿಂದಾಗಿ ಸಾಯಿಪ್ರಣೀತ್‌ ಅವರು ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಇದನ್ನೇ ಬಳಸಿಕೊಂಡ ಕ್ರಿಸ್ಟಿ ಆಕರ್ಷಕ ಸ್ಮ್ಯಾಷ್‌ ಹಾಗೂ ಡ್ರಾಪ್‌ಗಳ ಮೂಲಕ ಗೇಮ್‌ ಅನ್ನು ತಮ್ಮದಾಗಿಸಿಕೊಂಡು ಫೈನಲ್‌ ತಲುಪಿದರು.

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚೀನಾದ ಲಿನ್‌ ಡ್ಯಾನ್‌ ಹಾಗೂ ದಕ್ಷಿಣ ಕೊರಿಯಾದ ಕ್ವಾಂಗ್‌ ಹಿ ಹೊ ಅವರು ಮುಖಾಮುಖಿಯಾಗಲಿದ್ದಾರೆ. ಇದರಲ್ಲಿ ಗೆದ್ದವರು ಫೈನಲ್‌ ಪಂದ್ಯದಲ್ಲಿ ಜೋನಾಥನ್‌ ಅವರನ್ನು ಎದುರಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.