ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ: ಡಾ.ಆರತಿಕೃಷ್ಣ

Last Updated 6 ಮೇ 2018, 9:09 IST
ಅಕ್ಷರ ಗಾತ್ರ

ಕೊಪ್ಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ನೀಡಿದೆ’ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಮಹಿಳೆಯರ ಹೆಣ್ಣುಮಕ್ಕಳಿಗೆ 1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವ ‘ವಿದ್ಯಾಸಿರಿ’ ಯೋಜನೆ, ಉಚಿತ ಬಸ್ ಪಾಸ್ ಸೌಲಭ್ಯ, ಇನ್ನಿತರ ಹಲವಾರು ಯೋಜನೆ ಹಮ್ಮಿಕೊಂಡಿದೆ. ಮುಂದೆ ಅಧಿಕಾರಕ್ಕೆ ಬಂದರೆ ಇನ್ನಷ್ಟು ಯೋಜನೆ ರೂಪಿ ಸುವ ಸಾಧ್ಯತೆ ಇರುವುದರಿಂದ ಎಲ್ಲಾ ಮಹಿಳೆಯರು ಕಾಂಗ್ರೆಸ್ ಬೆಂಬ ಲಿಸುವಂತೆ ಕೋರುತ್ತೇನೆ’ ಎಂದರು.

ಟಿ.ಡಿ.ಗೌಡರಿಗೆ ಬೆಂಬಲ: ಅನಿವಾಸಿ ಭಾರತೀಯರ ಸಂಘಟನೆಗಾಗಿ ವಿದೇಶ ಪ್ರವಾಸದಲ್ಲಿ ಇದ್ದುದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೆ. ಆದರೂ ಕ್ಷೇತ್ರದ ಶಾಸಕರಾಗಿ, ಸಚಿವರಾಗಿದ್ದ ನನ್ನ ತಂದೆಯವರ ಅಭಿಮಾನಿಗಳು, ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಉಪಕೃತರಾದವರ ಒತ್ತಾಯಕ್ಕೆ ಮಣಿದು ಕೊನೆ ಗಳಿಗೆಯಲ್ಲಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಪಕ್ಷದ ಹೈಕಮಾಂಡ್ ರಾಜೇಗೌಡರಿಗೆ ಟಿಕೆಟ್ ನೀಡಿದ್ದರಿಂದ ನನಗೆ ಯಾವುದೇ ಬೇಸರವಿಲ್ಲ. ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಾನು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಕೆಲ ಸದಲ್ಲಿ ತೊಡಗಿದ್ದರಿಂದ ಬರಲಾಗಲಿಲ್ಲ. ಇನ್ನು ಚುನಾವಣೆ ಮುಗಿಯುವವರೆಗೂ ಕ್ಷೇತ್ರಾದ್ಯಂತ ಓಡಾಡಿ ರಾಜೇಗೌಡರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿ ಯುತ್ತೇನೆ’ ಎಂದರು.

ಅಭಿನಂದನೆ: ಇದೇ ಸಂದರ್ಭದಲ್ಲಿ ಅವರನ್ನು ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಅಭಿನಂದಿಸಿದ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತ ನಾಡಿ, ‘ಚುನಾವಣೆಯಲ್ಲಿ ಕ್ಷೇತ್ರ ದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಡಾ. ಆರತಿಕೃಷ್ಣ ಸೇರಿದಂತೆ ಎಲ್ಲ ಸ್ಪರ್ಧಾಕಾಂಕ್ಷಿಗಳು ಪಕ್ಷ ಸೂಚಿ ಸಿದ ಅಭ್ಯರ್ಥಿ ರಾಜೇಗೌಡರನ್ನು ಒಮ್ಮ ತದಿಂದ ಬೆಂಬಲಿಸುವ ಮೂಲಕ ಇತರ ರಿಗೆ ಮಾದರಿಯಾಗಿದ್ದಾರೆ. ಅದಕ್ಕಾಗಿ ಅವರನ್ನು ಪಕ್ಷ ಅಭಿನಂದಿಸುತ್ತದೆ’ ಎಂದರು.

ಮುಖಂಡರಾದ ಶಶಿಕುಮಾರ್, ಮೀಗ ಚಂದ್ರಶೇಖರ್, ಹರೀಶ್ ಭಂ ಡಾರಿ, ಓಣಿತೋಟ ರತ್ನಾಕರ್, ಎಚ್.ಎಸ್. ಇನೇಶ್, ಸುಬ್ರಹ್ಮಣ್ಯ ಶೆಟ್ಟಿ, ನುಗ್ಗಿ ಮಂಜುನಾಥ್, ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ಸೀತಾ ಲಕ್ಷ್ಮಿ, ಅನ್ನಪೂರ್ಣ ನರೇಶ್, ಅಂ ಬಿಕಾ ಮೋಹನ್, ಸಿ.ಕೆ. ಮಾಲತಿ, ಪೂರ್ಣಿ ಮಾ ಉಮೇಶ್, ಉಮಾ ಸುಧಾಕರ್, ಮಮತಾ ವಿಜಯ್, ಪ್ರಿಯಾಂಕ, ಗೀತ, ಶಾಂತ, ಸರೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT