ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಕಲ್ಯಾಣ

7
ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಎಚ್‌.ಕೆ. ಪಾಟೀಲ ಹೇಳಿಕೆ

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಕಲ್ಯಾಣ

Published:
Updated:

ಗದಗ: ಗದಗ ವಾರ್ಡ್‌ ವ್ಯಾಪ್ತಿಯಲ್ಲಿ ದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕೆ.ಪಾಟೀಲ ಅವರ  ಪರವಾಗಿ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.

ನಗರದ ದತ್ತಾತ್ರೇಯ ರಸ್ತೆ, ಮಕಾನಗಲ್ಲಿಯಲ್ಲಿ ಕಾರ್ಯಕರ್ತರು ಮತಯಾಚನೆ ಮಾಡಿದರು.ನಗರಸಭೆ ಸದಸ್ಯೆ ಜ್ಯೋತಿ ಭರತ ಈರಾಳ, ಸಂದೇಶಕುಮಾರ ಇರಾಳ, ಪರಶುರಾಮ ನಾಯ್ಕರ, ಹುಲಿಗೆಪ್ಪ ತಳವಾರ, ಮಾಹದೇವಪ್ಪ ಹುಲಿಕೋಟಿ, ಕುಮಾರ ಪೂಜಾರ ಇದ್ದರು.

ಸ್ವಾಮಿ ವಿವೇಕಾನಂದ ಕೂಳಚೆ ಪ್ರದೇಶದಲ್ಲಿ ಕಾರ್ಯಕರ್ತರು ಪ್ರಚಾರ ನಡೆಸಿದರು. ಗಂಗಿಮಡಿ, ಅಮರೇಶ ನಗರ, ತಾಜನಗರ, ವಿಜಯ ನಗರದಲ್ಲಿ ಪ್ರಚಾರ ನಡೆಯಿತು.

28ನೇ ವಾರ್ಡ್‌ನಲ್ಲಿ ಜೈನ ಸಮಾಜದಿಂದ ಎಚ್.ಕೆ.ಪಾಟೀಲ ಅವರ ಪರವಾಗಿ ಪ್ರಚಾರ ಸಭೆ ನಡೆಯಿತು.ಜೈನ ಸಮಾಜದ ಮುಖಂಡ ಆರ್.ಎನ್.ದೇಶಪಾಂಡೆ, ಭೋಜರಾಜ ನಾವಳ್ಳಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಮಹಾವೀರ ಜೈನ್, ರಮೇಶ ಬಳಬಟ್ಟಿ, ಸಿದ್ದಣ್ಣವರ, ಹೊಂಬಣ್ಣ, ಮಹಾವೀರ ಅಂಬಣ್ಣವರ, ಕೆ.ಡಿ.ಪಾಟೀಲ, ಆರ್.ಸಿ.ಪಾಟೀಲ ಇದ್ದರು.

‘ಕಾಂಗ್ರೆಸ್‌ನಿಂದ ಮಾತ್ರ ಅಲ್ಪಸಂಖ್ಯಾತರ ಕಲ್ಯಾಣವಾಗುತ್ತದೆ’ ಎಂದು ಎಚ್.ಕೆ.ಪಾಟೀಲ ಹೇಳಿದರು.ಇಲ್ಲಿನ ಜವಳಿ ಬಜಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಘಟಕದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಚನ್ನಬಸಪ್ಪ ಶಿವಶಿಂಪಿಗೇರ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry