ಸೋಮವಾರ, ಮಾರ್ಚ್ 1, 2021
31 °C

‘ಇಸ್ರೇಲ್‌ ಮಾದರಿ ಅಭಿವೃದ್ಧಿ ಮಾಡುವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇಸ್ರೇಲ್‌ ಮಾದರಿ ಅಭಿವೃದ್ಧಿ ಮಾಡುವೆ’

ನಾನು ಸಿ.ಎಂ. ಆದರೆ ಕರ್ನಾಟಕವನ್ನು ಇಸ್ರೇಲ್‌ ಮಾದರಿಯಲ್ಲಿ ಅಭಿವೃದ್ದಿಗೆ ಮಾಡುತ್ತೇನೆ. ನೀರಾವರಿ ಮತ್ತು ವೈಜ್ಞಾನಿಕ ಕೃಷಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತೇನೆ.

ಕುಡಿಯುವ ನೀರು, ಆಹಾರದ ಕೊರತೆಯಿಂದ ಬಳಲುತ್ತಿದ್ದ ಇಸ್ರೇಲ್‌ ದೇಶದಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಎಸ್ರಾಡೇನಿಸ್ ಎಂಬ ಯುವಕ ತನ್ನ ದೇಶದ ಜನರ ಸಂಕಟ ದೂರ ಮಾಡಲು ದೇಶದ ತುಂಬ ಹನಿ ನೀರಾವರಿ ಹಾಗೂ ವೈಜ್ಞಾನಿಕ ಬೇಸಾಯಕ್ಕೆ ಜನರನ್ನು ಹುರಿದುಂಬಿಸಿ ದೊಡ್ಡ ಕ್ರಾಂತಿ ಮಾಡಿದ. ಈಗ ಇಸ್ರೇಲ್‌, ಜಗತ್ತಿಗೆ ಮಾದರಿಯಾಗಿದೆ. ಕರ್ನಾಟಕದಷ್ಟಿರುವ ಈ ಪುಟ್ಟ ದೇಶ ಹಸಿರಿನಿಂದ ನಳನಳಿಸುತ್ತಿದೆ.

ನಾನು ಮುಖ್ಯಮಂತ್ರಿಯಾದರೆ ಇದೇ ಸ್ಫೂರ್ತಿ ಮತ್ತು ಮಾದರಿಯನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ನೀರಾವರಿ ಮತ್ತು ವೈಜ್ಞಾನಿಕ ಕೃಷಿಗೆ ಆದ್ಯತೆ ನೀಡಿ ಕೆಲಸ ಮಾಡುವೆ. ವೈಜ್ಞಾನಿಕ ಬೇಸಾಯದಿಂದ ಕೃಷಿ ಉತ್ಪನ್ನ ಹೆಚ್ಚುವುದು. ಜನರಿಗೆ ಸಾಕಷ್ಟು ಉದ್ಯೋಗ ಅವಕಾಶ ದೊರೆಯುವುದು. ರೈತರ ಆತ್ಮಹತ್ಯೆ ನಿಲ್ಲುತ್ತದೆ. ಬಡ ಕೃಷಿ ಕಾರ್ಮಿಕರು ದೊರದ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.

ಸಂಗಮೇಶ ನಿರಾಣಿ, ಜಮಖಂಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.