ಸ್ವತಂತ್ರ ಭಾರತದ ಮಹಾನ್ ಸುಳ್ಳುಗಾರ ಮೋದಿ– ಸಿದ್ದರಾಮಯ್ಯ

7

ಸ್ವತಂತ್ರ ಭಾರತದ ಮಹಾನ್ ಸುಳ್ಳುಗಾರ ಮೋದಿ– ಸಿದ್ದರಾಮಯ್ಯ

Published:
Updated:
ಸ್ವತಂತ್ರ ಭಾರತದ ಮಹಾನ್ ಸುಳ್ಳುಗಾರ ಮೋದಿ– ಸಿದ್ದರಾಮಯ್ಯ

ಚಾಮರಾಜನಗರ: 'ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಹಾನ್ ಸುಳ್ಳುಗಾರ ಅಂದರೆ ಅದು ಮಿಸ್ಟರ್ ಮೋದಿ. ಅವರ ಸರ್ಕಾರ ಡೀಲ್ ಸರ್ಕಾರ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಇಲ್ಲಿನ ಹನೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, 'ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ರೈತರ ಸಾಲ ಮನ್ನಾ ಮಾಡಲು ಆಗಲಿಲ್ಲ. ಆಗ ಕೇಳಿದರೆ ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಅಂದಿದ್ರು. ಆದರೆ ಈಗ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ ಅಂತಾರೆ. ಇವರಿಗೆ ಒಂದು ನಾಲಿಗೆನಾ ಎರಡು ನಾಲಿಗೆನಾ' ಎಂದು ಹರಿಹಾಯ್ದರು.

(ಹನೂರಿನಲ್ಲಿ ನಡೆದ ಸಮಾವೇಶದ ಚಿತ್ರ ‌)

ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಇನ್ನು ಏನು ತಾನೇ ಹೇಳಲು ಸಾಧ್ಯ. ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಾ ಕನವರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry