ಸೋಮವಾರ, ಮಾರ್ಚ್ 8, 2021
22 °C

ಪಂದ್ಯಕ್ಕೂ ಮುನ್ನ ಗಣಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ’ಕಿಂಗ್ಸ್‌’ ಒಡತಿ ಪ್ರೀತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಂದ್ಯಕ್ಕೂ ಮುನ್ನ ಗಣಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ’ಕಿಂಗ್ಸ್‌’ ಒಡತಿ ಪ್ರೀತಿ

ಇಂದೋರ್‌: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಒಡತಿ ಪ್ರೀತಿ ಜಿಂಟಾ ಅವರು ರಾಜಸ್ಥಾನ ರಾಯಲ್ಸ್‌ ಎದುರು ಭಾನುವಾರ ನಡೆದ ಪಂದ್ಯಕ್ಕೂ ಮುನ್ನ ಖಾಜ್ರಾದ ಗಣೇಶ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕಿಂಗ್ಸ್‌ ತಂಡದ ಕೆಲವು ಪಂದ್ಯಗಳು ಇಲ್ಲಿನ ಹೋಳ್ಕರ್‌ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿರುವುದರಿಂದ ನಗರದ ಪ್ರಸಿದ್ಧ ಗಣೇಶ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ಪ್ರೀತಿಗೆ ದೊರಕಿತ್ತು.

ಪ್ರೀತಿ ಯಾರಿಗೂ ಗೊತ್ತಾಗದಂತೆ ಸ್ಕ‌್ರಾಫ್‌ನಿಂದ ಮುಖ ಮುಚ್ಚಿಕೊಂಡು, ಕೇವಲ ಒಬ್ಬ ಅಂಗ ರಕ್ಷಕನೊಡಗೆ ದೇವಾಲಯಕ್ಕೆ ಬಂದಿದ್ದರು. ಆದರೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಪೂಜಾರಿ ಸೇರಿದಂತೆ ಕೆಲವರು ಅವರನ್ನು ಗುರುತಿಸಿದ್ದಾರೆ. ಈ ವೇಳೆ ಗೊಂದಲ ಸೃಷ್ಟಿಸದಂತೆ ಅಲ್ಲಿದ್ದವರಲ್ಲಿ ಮನವಿ ಮಾಡಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊವನ್ನು ದೇವಾಲಯದ ಅರ್ಚಕರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ ಭಾನುವಾರದ ಎದುರಾಳಿ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯಾ ರಹಾನೆ ಅವರೂ ನಗರಕ್ಕೆ ಬಂದಾಗಲೆಲ್ಲ ತಪ್ಪದೆ ಇಲ್ಲಿಗೆ ಭೇಟಿ ನೀಡುತ್ತಾರೆ.

ಸದ್ಯ ಐಪಿಎಲ್‌–2018ರಲ್ಲಿ ಆಡಿರುವ 9ರಲ್ಲಿ 6 ಪಂದ್ಯಗಳನ್ನು ಗೆದ್ದಿರುವ ಪ್ರೀತಿ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.