ಮಹದಾಯಿ ಇತ್ಯರ್ಥಕ್ಕೆ ವಿಫಲ: ಪೂಜಾ ಗಾಂಧಿ ಆರೋಪ

7
ರೋಣ, ನರೇಗಲ್‌ನಲ್ಲಿ ನಟಿ ರೋಡ್‌ ಷೋ

ಮಹದಾಯಿ ಇತ್ಯರ್ಥಕ್ಕೆ ವಿಫಲ: ಪೂಜಾ ಗಾಂಧಿ ಆರೋಪ

Published:
Updated:
ಮಹದಾಯಿ ಇತ್ಯರ್ಥಕ್ಕೆ ವಿಫಲ: ಪೂಜಾ ಗಾಂಧಿ ಆರೋಪ

ರೋಣ: ಮಹದಾಯಿ ಸಮಸ್ಯೆ ಬಗೆಹರಿಸುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡುತ್ತಿವೆ. ಸಮಸ್ಯೆಯನ್ನು ಇತ್ಯರ್ಥ ಮಾಡಲು ಎರಡೂ ಪಕ್ಷಗಳು ವಿಫಲವಾಗಿವೆ ಎಂದು ನಟಿ ಪೂಜಾ ಗಾಂಧಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ಗಳ ಜಗಳದ ಮಧ್ಯೆ ಮಹದಾಯಿ ಸಮಸ್ಯೆ ಇತ್ಯರ್ಥವಾಗದೇ ಉಳಿದಿದೆ. ಕೇವಲ ಹುಸಿ ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ ಹಣದ ಆಮಿಷವನ್ನು ತೋರಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 3800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ ಅವರಿಗೆ ಯಾವುದೇ ರೀತಿಯಾದ ಪರಿಹಾರ ಸರ್ಕಾರದಿಂದ ದೊರೆತಿಲ್ಲ ಎಂದು ಆರೋಪಿಸಿದರು.

ಕೇವಲ ಚುನಾವಣೆ ಪ್ರಚಾರಕ್ಕಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ರೈತರ ಸಾಲ ಮನ್ನಾ ಮಾಡುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿವೆ. ಕರ್ನಾಟಕಕ್ಕೆ ರಾಷ್ಟ್ರೀಯ ಪಕ್ಷಗಳು ಏನು ಕೊಡುಗೆಗಳನ್ನು ನೀಡಿದೆ. ಒಂದು ರಾಷ್ಟ್ರೀಯ ಪಕ್ಷದವರು ಹೇಳುತ್ತಾರೆ. ನೀವು ಜೈಲಿಗೆ ಹೋಗಿ ಬಂದವರು ಎಂದು ಮತ್ತೊಂದು ರಾಷ್ಟ್ರೀಯ ಪಕ್ಷದವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೆನೆ ಎಂದು ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ ವಿನಾ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದರು.

ಈ ಬಾರಿ ಜೆಡಿಎಸ್ ಪಕ್ಷವು ಅಧಿಕಾರದ ಗದ್ದುಗೆ ಏರಲಿದ್ದು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಲಿದ್ದಾರೆ. ಈ ನಿಟ್ಟಿನಲ್ಲಿ ಜನರು ನಮ್ಮ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಬೇಕು ಜೆಡಿಎಸ್ ಬೆಂಬಲಿಸಬೇಕು ಎಂದರು.

ನಂತರ ಪಟ್ಟಣದ ಪೊತರಾಜನ ಕಟ್ಟೆಯಿಂದ ಪ್ರಮುಖ ರಸ್ತೆಗಳಾದ ಮುಲ್ಲಾನಬಾವಿ ವೃತ್ತ, ಸೂಡಿ ವೃತ್ತದ ಮೂಲಕ ತೆರದ ವಾಹನದ ಮೂಲಕ ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರ ದೊಡ್ಡಮೇಟಿಯವರ ಪರ ಪ್ರಚಾರ ನಡೆಸಿದರು.

ಬಸವರಾಜ ಧಾರವಾಡ, ವೆಂಕಣ್ಣ ಬಂಗಾರಿ, ಗುರುರಾಜ ಕುಲಕರ್ಣಿ, ಅಂದಾನಯ್ಯ ಕುರ್ತಕೋಟಿಮಠ, ಸಂಗಮೇಶ ಮಂಗಳೂರ ಹಾಜರಿದ್ದರು.

ನರೇಗಲ್‌, ನಿಡಗುಂದಿ: ಮತಯಾಚನೆ

ನರೇಗಲ್: ಚಿತ್ರನಟಿ ಪೂಜಾ ಗಾಂಧಿ ಅವರು ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿಯವರ ಪರವಾಗಿ ಹೋಬಳಿಯ ನಿಡಗುಂದಿ ಹಾಗೂ ನರೇಗಲ್ ಪಟ್ಟಣ ದಲ್ಲಿ ಭಾನುವಾರ ಸಂಜೆ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜಾ ಗಾಂಧಿ ಅವರು, ‘ನಾವೆಲ್ಲ ಬದಲಾವಣೆ ಬಯಸುತ್ತೇವೆ. ಆದರೆ ಅಭಿವೃದ್ಧಿ ಹಾಗೂ ಬದಲಾವಣೆಗಾಗಿ ಟೊಂಕ ಕಟ್ಟಿ ನಿಲ್ಲುವವರು ತುಂಬಾ ವಿರಳ. ರವೀಂದ್ರನಾಥ ದೊಡ್ಡಮೇಟಿಯವರು ಅಂಥ ವಿರಳರಲ್ಲಿ ಒಬ್ಬರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜಕೀಯದಲ್ಲಿ ಇರುವವರೆಗೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಹಾಗೂ ಜನಪರ ಆಡಳಿತ ನಡೆಸುತ್ತೇನೆ’ ಎಂದು ಕೋರ್ಟ್ ಅಫಿಡವಿಟ್ ಮಾಡಿಸಿರುವ ರವೀಂದ್ರನಾಥ ಅವರಿಗೆ ಮತ ಹಾಕದಿದ್ದರೆ ಇನ್ಯಾರಿಗೆ ಹಾಕಲು ಸಾಧ್ಯ? ಎಂದು ಕೇಳುವ ಮೂಲಕ ಮತದಾರರಲ್ಲಿ ಪೂಜಾ ಗಾಂಧಿ ಗೆಲ್ಲಿಸುವಂತೆ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ರವೀಂದ್ರನಾಥ ದೊಡ್ಡಮೇಟಿ, ಮಕ್ತುಂಸಾಬ ಮುಧೋಳ, ಕಸ್ತೂರಿ ದೊಡ್ಡಮೇಟಿ, ಸುಷ್ಮಾ ದೊಡ್ಡಮೇಟಿ, ಗುರುರಾಜ ಕುಲಕರ್ಣಿ, ಕೃಷ್ಣಾ ಕಾಳೆ ಇದ್ದರು.

**

ಉತ್ತರ ಪ್ರದೇಶ ನನ್ನ ಜನ್ಮಭೂಮಿಯಾಗಿದ್ದು, ಕರ್ನಾಟಕ ನನ್ನ ಕರ್ಮಭೂಮಿ ಯಾಗಿದೆ. ಇಲ್ಲಿನ ಜನ ನನ್ನನ್ನು ಆಶೀರ್ವದಿಸಿರುವುದು ಹೆಮ್ಮೆಯ ಸಂಗತಿ

- ಪೂಜಾ ಗಾಂಧಿ, ಚಿತ್ರನಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry