ಪಾಕ್‌ ಸಚಿವರ ಮೇಲೆ ಗುಂಡಿನ ದಾಳಿ: ಯಶಸ್ವಿ ಶಸ್ತ್ರಚಿಕಿತ್ಸೆ

7

ಪಾಕ್‌ ಸಚಿವರ ಮೇಲೆ ಗುಂಡಿನ ದಾಳಿ: ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:
ಪಾಕ್‌ ಸಚಿವರ ಮೇಲೆ ಗುಂಡಿನ ದಾಳಿ: ಯಶಸ್ವಿ ಶಸ್ತ್ರಚಿಕಿತ್ಸೆ

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನ್ಯಾರೊವಾಲ್‌ನಲ್ಲಿ  ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಆಂತರಿಕ ಸಚಿವ ಅಹ್ಸಾನ್‌ ಇಕ್ಬಾಲ್‌ (59) ಅವರಿಗೆ ಸೋಮವಾರ ಎರಡು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಭಾನುವಾರ ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಸಚಿವರ ಬಲ ತೋಳಿಗೆ ಗುಂಡು ತಗುಲಿತ್ತು. ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದಾಳಿ ಸಂಬಂಧ ಅಬ್ದಿ ಹುಸೇನ್‌ (21) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತನೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅಜೀಮ್‌ ಎಂಬಾತನನ್ನು ಬಂಧಿಸಲಾಗಿದೆ.

‘ಗುಂಡು ಹಾರಿಸಿದ ತಕ್ಷಣವೇ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್-ಎನ್) ಕಾರ್ಯಕರ್ತರು ಶಂಕಿತ ಆರೋಪಿಯನ್ನು ಹಿಡಿದ ಕಾರಣ ಆತನಿಗೆ ಎರಡನೇ ಬಾರಿ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ’ ಎಂದು ಹಿರಿಯಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಹುಸೇನ್‌ ಟಿಎಲ್‌ವೈಪಿ ಸಂಘಟನೆಗೆ ಸೇರಿಸಿದವನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry