ಚುನಾವಣಾ ಉರಿ, ಧಗೆ!

7

ಚುನಾವಣಾ ಉರಿ, ಧಗೆ!

Published:
Updated:

ಮರಗಳಿಲ್ಲದ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಜೋರಾಗಿದೆ. ‘ಅಬ್ಬಬ್ಬಾ! ಎಂಥ ಬಿಸಿಲು... ಧಗೆ’ ಎನ್ನುವ ಗೋಳಾಟವೂ ಇದೆ. ಅಭ್ಯರ್ಥಿಗಳಿಗೆ (ಯಾವ ರಾಜಕೀಯ ಪಕ್ಷವಾದರೂ) ಮರಗಳಿಲ್ಲದೇ ಬರಡಾಗಿರುವ ಪ್ರದೇಶಗಳನ್ನು ಪರಾಂಬರಿಸಿ ನೋಡುವಂಥ ಕಾಲ! ಮರಗಿಡ, ಮಣ್ಣು, ಕಲ್ಲು, ಗಣಿ ಲೂಟಿ ಮಾಡಿದ ಬಳಿಕ ಉಳಿಯುವುದೇನು? ಬಿಸಿಲ ತಾಪ 36–40 ಡಿಗ್ರಿ ಸೆಲ್ಸಿಯಸ್ ‘ಉರಿ’ಯಲ್ಲದೇ ಮತ್ತೇನು?

ಪರಿಸರ ರಕ್ಷಣೆ ಮಾಡುವ ಪ್ರತಿಜ್ಞೆ ಮಾಡಿದವರನ್ನು ಆಯ್ಕೆ ಮಾಡುವ ಮತದಾರರು, ‘ನಿಮಗಿದು ಶಿಕ್ಷೆ, ಪಾಠ’ ಎನ್ನುತ್ತಿದ್ದಾರೆ. ಮತದಾರರೂ ಪ್ರಕೃತಿ ಸಂರಕ್ಷಣೆಯ ಹೊಣೆಗಾರಿಕೆ ಅರಿಯುವಂತಾಗಿದೆ.

-ಎಸ್.ಎನ್. ಅಮೃತ, ಪುತ್ತೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry