ಶನಿವಾರ, ಮಾರ್ಚ್ 6, 2021
21 °C

ಸೂಚ್ಯಂಕ 293 ಅಂಶ ಜಿಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ಸೂಚ್ಯಂಕ 293 ಅಂಶ ಜಿಗಿತ

ಮುಂಬೈ: ಉತ್ತಮ ಹೂಡಿಕೆ ಚಟುವಟಿಕೆಯ ಫಲವಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮತ್ತೆ ವಹಿವಾಟು ಚೇತರಿಕೆ ಹಾದಿಗೆ ಮರಳಿದೆ.

ದೇಶಿ ಸಾಂಸ್ಥಿಕ ಹೂಡಿಕೆದಾರರು ಹೊಸದಾಗಿ ಖರೀದಿ ವಹಿವಾಟು ಆರಂಭಿಸಿದ್ದಾರೆ ಇದರ ಜತೆಗೆ ತ್ರೈಮಾಸಿಕದಲ್ಲಿ ಕೆಲವು ಕಂಪನಿಗಳು ಉತ್ತಮ ಆರ್ಥಿಕ ಸಾಧನೆ ಪ್ರಕಟಿಸುವಆಶಾವಾದವೂ ಸೂಚ್ಯಂಕ ಏರಿಕೆ ಕಾಣುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 293 ಅಂಶ ಜಿಗಿತ ಕಂಡು ಮತ್ತೆ 35 ಸಾವಿರದ ಗಡಿ ದಾಟಿತು. ಮೂರು ತಿಂಗಳ ಗರಿಷ್ಠ ಮಟ್ಟವಾದ 35,208 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗುರುವಾರ ಮತ್ತು ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು ಒಟ್ಟಾರೆ 261 ಅಂಶಗಳಷ್ಟು ನಷ್ಟಕ್ಕೆ ಗುರಿಯಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 97 ಅಂಶ ಹೆಚ್ಚಾಗಿ 10,715 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಶುಕ್ರವಾರ ವಾಲ್‌ ಸ್ಟ್ರೀಟ್‌ ಏರುಮುಖವಾಗಿ ವಹಿವಾಟು ಅಂತ್ಯಗೊಳಿಸಿದ್ದು ಸೋಮವಾರ ದೇಶಿ ಷೇರುಪೇಟೆಗಳಲ್ಲಿ ಚೇತರಿಕೆ ನೆರವಾಯಿತು. ಅಮೆರಿಕದ ನಿರುದ್ಯೋಗ ಪ್ರಮಾಣ ಕಡಿಮೆ ಆಗಿರುವುದರಿಂದ ಫೆಡರಲ್ ರಿಸರ್ವ್ ಸದ್ಯಕ್ಕೆ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ತಗ್ಗಿದೆ. ಈ ಅಂಶವೂ ವಹಿವಾಟು ಏರಿಕೆಗೆ ನೆರವಾಯಿತು.

ಜಾಗತಿಕ ಮಾರುಕಟ್ಟೆಗಳಲ್ಲಿಯೂ ಮಿಶ್ರ ವಹಿವಾಟು ಕಂಡುಬಂದಿತು. ಹಾಂಕಾಂಗ್‌ನ ಹಾಗ್‌ ಸೆಂಗ್‌ ಶೇ 0.22, ಶಾಂಘೈ ಕಂಪೋಸಿಟ್‌ ಸೂಚ್ಯಂಕ ಶೇ 1.48 ರಷ್ಟು ಏರಿಕೆ ಕಂಡರೆ, ಜಪಾನ್‌ನ ನಿಕೇಯ್‌ ಸೂಚ್ಯಂಕ ಶೇ 0.03 ರಷ್ಟು ಇಳಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.