ಚೀನಾಕ್ಕೆ ಕಿಮ್‌ ದಿಢೀರ್‌ ಭೇಟಿ

7

ಚೀನಾಕ್ಕೆ ಕಿಮ್‌ ದಿಢೀರ್‌ ಭೇಟಿ

Published:
Updated:
ಚೀನಾಕ್ಕೆ ಕಿಮ್‌ ದಿಢೀರ್‌ ಭೇಟಿ

ಬೀಜಿಂಗ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮಂಗಳವಾರ ಚೀನಾಕ್ಕೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಕಿಮ್‌ ಜಾಂಗ್‌ ಅವರು  ಟ್ರಂಪ್‌ ಅವರನ್ನು ಸಿಂಗಪುರದಲ್ಲಿ ಜೂನ್‌ ತಿಂಗಳ ಮಧ್ಯ ಭಾಗದಲ್ಲಿ ಭೇಟಿಯಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಷಿ ಮತ್ತು ಕಿಮ್‌ ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.

ದೇಶದ ಈಶಾನ್ಯ ಭಾಗದಲ್ಲಿರುವ ಬಂದರು ನಗರಿ ದಲಿಯಾನ್‌ನಲ್ಲಿ ಸೋಮವಾರ ಮತ್ತು ಮಂಗಳವಾರ ಈ ಇಬ್ಬರು ನಾಯಕರು ಪರಸ್ಪರ ಚರ್ಚೆ ನಡೆಸಿದರು.

‘ಎರಡು ದೇಶಗಳ ಅಧ್ಯಕ್ಷರ ನಡುವೆ ಸುಮಧುರ ಬಾಂಧವ್ಯ ಇದ್ದು, ಎರಡು ಜೂನ್‌ ತಿಂಗಳ ಮಧ್ಯ ಭಾಗದಲ್ಲಿ ರಾಷ್ಟ್ರಗಳ ನಡುವಿನ ಬಾಂಧವ್ಯ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದರು’ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ‌

ಕಡಲ ತೀರದಲ್ಲಿ ಸಂಚರಿಸಿದ ಉಭಯ ದೇಶಗಳ ಅಧ್ಯಕ್ಷರು, ಉದ್ಯಾನವನದಲ್ಲಿ ಅನೌಪಚಾರಿಕ ಮಾತುಕತೆ ನಡೆಸಿದರು. ಇತ್ತೀಚೆಗೆ ಭಾರತದ ಪ್ರಧಾನಿ ಮೋದಿ ಅವರು ಚೀನಾದ ವುಹಾನ್‌ಗೆ ಭೇಟಿ ನೀಡಿದ್ದಾಗ ಇದೇ ಶೈಲಿಯಲ್ಲಿ ಮಾತುಕತೆ ನಡೆದಿತ್ತು.

‘ದಕ್ಷಿಣ ಕೊರಿಯಾದ ಜೊತೆಗೆ ಮಾತುಕತೆ ಹಾಗೂ ದೇಶ ನಿರ್ಮಾಣದಲ್ಲಿ ಪಕ್ಷದ ಪಾತ್ರದ ಕುರಿತಂತೆ’ಯೂ ಷಿ ಅವರಿಗೆ ಕಿಮ್‌ ಅವರು ಮಾಹಿತಿ ನೀಡಿದರು ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಆರು ವರ್ಷಗಳ ಹಿಂದೆ ಉತ್ತರ ಕೊರಿಯಾದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾರ್ಚ್‌ನಲ್ಲಿ ಕಿಮ್‌ ಚೀನಾಕ್ಕೆ ಭೇಟಿ ನೀಡಿದ್ದರು.

ಉತ್ತರ ಕೊರಿಯಾಕ್ಕೆ ಅವರು ಹಿಂತಿರುಗಿದ ಬಳಿಕವೇ ಈ ಭೇಟಿ ವಿಷಯ ಬಹಿರಂಗವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry