ಭಾನುವಾರ, ಮಾರ್ಚ್ 7, 2021
30 °C
ಹ್ಯೂಬ್ಲೋ ವಾಚ್‌ ಕುರಿತು ಪ್ರಸ್ತಾಪ

ಸಿದ್ದರಾಮಯ್ಯಗೆ ಅನಂತ ಕುಮಾರ್‌ ಎರಡು ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯಗೆ ಅನಂತ ಕುಮಾರ್‌ ಎರಡು ಪ್ರಶ್ನೆ

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಅನಂತ ಕುಮಾರ್ ಎರಡು ಪ್ರಶ್ನೆ ಹಾಕಿದರು.

'ಸಿದ್ದರಾಮಯ್ಯ ಅವರೇ ಕಟ್ಟಿರುವ ಹ್ಯುಬ್ಲೋ ವಾಚ್‌ನ ಕಸ್ಟಮ್ ಡ್ಯೂಟಿ ಕಟ್ಟಿದ್ದೀರಾ? ಪಾವತಿಸಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕು. ಕಸ್ಟಮ್ಸ್ ತಪ್ಪಿಸಿ ಸ್ಮಗಲ್ ಮಾಡಿ ತಂದಿರುವ ವಾಚ್ ಅದಲ್ಲ ಎಂದು 24 ಗಂಟೆಯೊಳಗೆ ಅವರು ದಾಖಲೆ ಬಿಡುಗಡೆ ಮಾಡಬೇಕು.

ಉತ್ತರಿಸದೇ ಇದ್ದಲ್ಲಿ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸುಳ್ಳು ಪ್ರಚಾರ ಮಾಡುತ್ತಿರುವುದನ್ನು ಒಪ್ಪಿಕೊಂಡು ಕಣದಿಂದ ಹಿಂದೆ ಸರಿಯಬೇಕು' ಎಂದರು.

ಕುಮಾರಸ್ವಾಮಿ ಮತ್ತು ಅಮಿತ್ ಶಾ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿದ್ದಾರೆ ಎನ್ನುವ ಸಿದ್ದರಾಮಯ್ಯ, ಅವರಲ್ಲಿರುವ ಸಾಕ್ಷಿಯನ್ನು ರಾಜ್ಯದ ಜನತೆ ಎದುರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಅವರು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.