ಬಿಜೆಪಿ, ಕಾಂಗ್ರೆಸ್‌ ಚಲಾವಣೆಯಲ್ಲಿರದ ನಾಣ್ಯ

7
ಜೆಡಿಎಸ್‌ ಮುಖಂಡ ಮಧು ಬಂಗಾರಪ್ಪ ಅರೋಪ

ಬಿಜೆಪಿ, ಕಾಂಗ್ರೆಸ್‌ ಚಲಾವಣೆಯಲ್ಲಿರದ ನಾಣ್ಯ

Published:
Updated:

ರಿಪ್ಪನ್‌ಪೇಟೆ: ‘ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ– ಕಾಂಗ್ರೆಸ್‌ ಚಲಾವಣೆಯಲ್ಲಿಲ್ಲದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ಜನಹಿತವನ್ನು ಎಂದಿಗೂ ಬಯಸುವುದಿಲ್ಲ’ ಎಂದು ಜೆಡಿಎಸ್‌ ಮುಖಂಡ ಮಧು ಬಂಗಾರಪ್ಪ ಅರೋಪಿಸಿದರು.

ಪಟ್ಟಣದ ಸಮೀಪದ ಹೊಂಬುಜ ಹೋಬಳಿ ವ್ಯಾಪ್ತಿಯ ಹೊಂಡಲಗದ್ದೆಯಲ್ಲಿ ಮಂಗಳವಾರ ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್‌.ಎಂ. ಮಂಜುನಾಥ ಗೌಡರ ಪರ ಬಹಿರಂಗ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರಿಂದ ರಾಜಕೀಯ ಗರಡಿಯಲ್ಲಿ ಬೆಳೆದ ಕೆಲ ಮುಖಂಡರು ವಿವಿಧ ಪಕ್ಷದಲ್ಲಿದ್ದು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

ರಾಜ್ಯದ ಜನರ ಆಶೋತ್ತರ ಈಡೇರಿಸಲು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಮುಂಚೂಣಿಯಲ್ಲಿದೆ. ಸಮರ್ಥ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಸಾಗರ– ತೀರ್ಥಹಳ್ಳಿ ಭಾಗದಲ್ಲಿ ಅಪ್ಪಾಜಿ ಅಭಿಮಾನಿ ಬಳಗ ದೊಡ್ಡದಿದೆ. ಈ ಹಿಂದೆ ಬದಲಾವಣೆ ಅಲೆಯಲ್ಲಿ ಅಪ್ಪಾಜಿ ಅವರನ್ನು ಬೆಂಬಲಿಸಿದಂತೆ ಅವರ ನೆರಳಲ್ಲಿ ಬೆಳೆದ ನನಗೆ ಮತ್ತು ಆರ್.ಎಂ. ಮಂಜುನಾಥಗೌಡ ಅವರನ್ನೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

‘ಸುಳ್ಳು ಆರೋಪಗಳ ಮೂಲಕ ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಈ ಬಗ್ಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.

ತಾಲ್ಲೂಕು ಅಧ್ಯಕ್ಷ ಆರ್‌. ಮದನ್‌, ಮುಖಂಡರಾದ ಎಂ.ವಿ. ಜಯರಾಂ, ವಿದ್ಯಾಧರ ಭಟ್, ಅಲುವಳ್ಳಿ ವಿರೇಶ್‌, ವಾಟ್‌ಗೋಡು ಸುರೇಶ್‌, ಯಶಸ್ವಿನಿ ಋಷಭರಾಜ್‌ ಜೈನ್, ಎಂ.ಎಂ. ಪರಮೇಶ್‌, ಎನ್‌. ವರ್ತೇಶ್‌, ಕಲ್ಲೂರು ಈರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry