ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬರೆಯಲು ದೇಶದ 68 ಜನ ಪತ್ರಕರ್ತರು, ಬರಹಗಾರರು, ಸಿನಿಮಾ ನಟರಿಗೆ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರತಿ ತಿಂಗಳು 2 ರಿಂದ 5 ಲಕ್ಷ ರೂಪಾಯಿ ನೀಡುತ್ತಿದೆ ಎಂಬ ವರದಿ ಪ್ರಕಟಿಸಿದ್ದ ಪೋಸ್ಟ್ಕಾರ್ಡ್ ಸುದ್ದಿ ಜಾಣದ ವರದಿ ಸುಳ್ಳು ಎಂದು ಬೂಮ್ ಸುದ್ದಿ ತಾಣ ವರದಿ ಮಾಡಿದೆ.

ಪೋಸ್ಟ್ಕಾರ್ಡ್ ಸುದ್ದಿ ತಾಣ ಮಾರ್ಚ್ ತಿಂಗಳ 24ರಂದು ದೇಶದ 68 ಜನ ಪತ್ರಕರ್ತರು, ಬರಹಗಾರರು, ಸಿನಿಮಾ ನಟರು ಪ್ರಧಾನಿ ಮೋದಿ ವಿರುದ್ಧ ಪ್ರಚಾರ ಮಾಡಲು ಮತ್ತು ಅವರ ವಿರುದ್ಧ ಬರೆಯಲು ಕೇಂಬ್ರಿಡ್ಜ್ ಅನಾಲಿಟಿಕಾದಿಂದ ಹಣ ಪಡೆಯುತ್ತಾರೆ ಎಂಬ ವರದಿ ಪ್ರಕಟಿಸಿತ್ತು. ಆದರೆ ಹಣ ಪಡೆಯುತ್ತಿರುವ ಪತ್ರಕರ್ತರು, ಬರಹಗಾರರು, ಸಿನಿಮಾ ನಟರ ಹೆಸರನ್ನು ಅದು ಬಹಿರಂಗಪಡಿಸಿರಲಿಲ್ಲ.

ಇದೇ ಸುದ್ದಿಯ ಕುರಿತಾಗಿ ಇಂಗ್ಲಿಷ್ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಚರ್ಚೆಯನ್ನು ಪ್ರಸಾರ ಮಾಡಿತ್ತು.

ಈ ಬಗ್ಗೆ ಬೂಮ್ ಸುದ್ದಿ ತಾಣದ ವರದಿಗಾರರು ಈ ಸುದ್ದಿಯ ನಿಖರತೆಯನ್ನು ಪರೀಕ್ಷಿಸಲು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಮತ್ತು ರಿಪಬ್ಲಿಕ್ ಟಿವಿಯಯನ್ನು ಸಂಪರ್ಕಿಸಿದ್ದರು. ಆದರೆ ಅವರು ಇನ್ನು ಉತ್ತರ ನೀಡಬೇಕಾಗಿದೆ ಎಂದು ಬೂಮ್ ವರದಿ ಮಾಡಿದೆ.

ಪೋಸ್ಟ್ಕಾರ್ಡ್ ಪ್ರಕಟಿಸಿದ ವರದಿge ಗಟ್ಟಿ ಆಧಾರಗಳಿಲ್ಲ. ಪ್ರಶಾಂತ್ ಪಿ ಉಮ್ರೊ ಎಂಬುವವರ ಟ್ವೀಟ್ ಅನ್ನು ಆಧಾರವಾಗಿಟ್ಟು ಕೊಂಡು ವರದಿ ಪ್ರಕಟಿಸಲಾಗಿದೆ. ಪ್ರಶಾಂತ್ ಉಮ್ರೊ ವಕೀಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇವರು ಈ ಹಿಂದೆ ಬ್ರೆಜಿಲ್ ದೇಶದ ಅನಾರೋಗ್ಯ ಪೀಡಿತ ಮಗುವನ್ನು ಗರ್ಬೀಣಿ ರೋಹಿಂಗ್ಯಾ ಮಗು ಎಂದು ಪೋಸ್ಟ್ ಮಾಡಿದ್ದರು.

ದೇಶದ 9 ಪಕ್ಷಗಳು ಸೇರಿ ಒಂದು ಸರ್ಕಾರೇತರ ಸಂಸ್ಥೆಯನ್ನು ತೆರೆದು, ಅದರ ಮೂಲಕ ಕೇಂಬ್ರಿಡ್ಜ್ ಅನಾಲಿಟಿಕ ಕಂಪೆನಿಗೆ 800 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ, 2019ರ ಚುನಾವಣೆಗೆ ನೆರವು ನೀಡುವಂತೆ ಮತ್ತು ಮೋದಿ ವಿರುದ್ಧ ಪ್ರಚಾರ ಮಾಡುವಂತೆ ಕೇಂಬ್ರಿಡ್ಜ್ ಅನಾಲಿಟಿಕ ಕಂಪನಿಯನ್ನು ಕೇಳಿಕೊಂಡಿದ್ದರು ಎಂದು ಪೋಸ್ಟ್ಕಾರ್ಡ್ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.