ಶನಿವಾರ, ಮಾರ್ಚ್ 6, 2021
32 °C

‘ರಾಝಿ’ ಚಿತ್ರ ಸಾನಿಯಾ ಮಿರ್ಜಾ ಅವರ ಆತ್ಮಕಥೆಯೇ?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ರಾಝಿ’ ಚಿತ್ರ ಸಾನಿಯಾ ಮಿರ್ಜಾ ಅವರ ಆತ್ಮಕಥೆಯೇ?

ಬಾಲಿವುಡ್ ಚಿನಕುರುಳಿ ಅಲಿಯಾ ಭಟ್ ಅಭಿನಯದ ‘ರಾಝಿ’ ಚಿತ್ರ ಬಿಡುಗಡೆಯಾಗಿದ್ದು, ಇದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನಗಾಥೆಯೇ? ಎಂಬ ಅನುಮಾನ ಸಿನಿಪ್ರಿಯರಲ್ಲಿ ಹುಟ್ಟಿದೆ.

ರಾಜಿ ಚಿತ್ರವು, ಭಾರತದ ಗೂಢಾಚಾರಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಸೇನೆಯ ಮಾಹಿತಿಗಳನ್ನು ಭಾರತಕ್ಕೆ ರವಾನಿಸುವ ಕಥಾಹಂದರ ಒಳಗೊಂಡಿದೆ.

ಬಾಲಿವುಡ್ ಗಾಂಡು ಎಂಬ ಟ್ವಿಟರಿಗರೊಬ್ಬರು,  ಭಾರತದ ಯುವತಿಯೊಬ್ಬಳು ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿರುವವರ ಕುರಿತಾದ ಕಥೆ. ಆಕೆ ಈಗ ಭಾರತದಲ್ಲೇ ಇದ್ದಾರೆ. ಇದು ಸಾನಿಯಾ ಮಿರ್ಜಾ ಅವರ ಆತ್ಮಕಥೆ ಎಂದು  #RaaziTrailer ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವಿಟ್ ಮಾಡಿದ್ದಾರೆ.

ಪಾಕಿಸ್ತಾನಿ ಕ್ರಿಕೆಟರ್ ಶೋಯೆಬ್‌ ಮಲ್ಲಿಕ್ ಅವರನ್ನು ವಿವಾಹವಾಗಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಕಥೆ ಎಂಬ ದೃಷ್ಟಿಯಿಂದ ರಾಝಿ ಚಿತ್ರ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾನಿಯಾ ಹು....ನಾನು ಯೋಚಿಸಿರಲಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ನೀವು ಟ್ವೀಟ್ ಮಾಡಿರುವ ವಿಚಾರ ಸುಳ್ಳು ಸುದ್ದಿ. ಇದು ಸಾನಿಯಾ ಅವರಿಗೆ ನೋವುಂಟು ಮಾಡುತ್ತದೆ. ದಯವಿಟ್ಟು ಇದನ್ನು ಡಿಲೀಟ್ ಮಾಡಿ ಎಂದಿದ್ದಾರೆ

ಈ ಸಿನಿಮಾದಲ್ಲಿ ಟೆನಿಸ್ ಆಡುವುದಿಲ್ಲ. ಇದು ಸಾನಿಯಾ ಮಿರ್ಜಾ ಗೂಢಾಚಾರಿಯಲ್ಲ. ಟ್ವೀಟ್ ಮಾಡುವ ಮುನ್ನಾ ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.