ಬುಧವಾರ, ಮಾರ್ಚ್ 3, 2021
25 °C

ತೆಲಂಗಾಣ: ಎಕರೆಗೆ ₹8 ಸಾವಿರ ಸಹಾಯಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಂಗಾಣ: ಎಕರೆಗೆ ₹8 ಸಾವಿರ ಸಹಾಯಧನ

ಹೈದರಾಬಾದ್: ತೆಲಂಗಾಣದ ಶುಷ್ಕ ಭೂಪ್ರದೇಶದ ರೈತರಿಗೆ, ಪ್ರತಿ ಎಕರೆಗೆ ₹8 ಸಾವಿರ ಸಹಾಯಧನ ನೀಡುವ ನೂತನ ‘ರೈತುಬಂಧು’ ಯೋಜನೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. 58 ಲಕ್ಷಕ್ಕೂ ಹೆಚ್ಚು ರೈತರು ಇದರಿಂದ ಲಾಭ ಪಡೆಯಲಿದ್ದಾರೆ.

ಕರೀಂನಗರ ಜಿಲ್ಲೆಯ ಧರ್ಮರಾಜುಪಲ್ಲೆ–ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ರೈತರೊಬ್ಬರಿಗೆ ಮೊದಲ ಚೆಕ್‌ ಹಾಗೂ ಪಾಸುಬುಕ್ ನೀಡುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ಅವರು ಅಧಿಕೃತವಾಗಿ ಯೋಜನೆ ಉದ್ಘಾಟಿಸಿದರು.

ಈ ಯೋಜನೆಗೆ ಮಂಜೂರು ಮಾಡಿದ ಹಣವನ್ನು ಬೇರೆ ಕೆಲಸಗಳಿಗೆ ಬಳಸಬಾರದು ಎಂದು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ನರೇಗಾವನ್ನು ಕೃಷಿ ಅಥವಾ ಕೃಷಿ ಸಂಬಂಧಿ ಜತೆಗೆ ಜೋಡಣೆ ಮಾಡಲು ಸಭೆಯಲ್ಲಿ ನೆರೆದಿದ್ದ ರೈತರು ನಿರ್ಣಯ ಕೈಗೊಂಡರು.

ಜತೆಗೆ ಎಲ್ಲ ಬೆಳೆಗಳಿಗೂ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ 25ರಷ್ಟು ಹೆಚ್ಚಿಸಬೇಕು ಎಂದೂ ನಿರ್ಣಯ ಕೈಗೊಳ್ಳಲಾಗಿದೆ.

ಸಾಲಗಾರ ರೈತರಿಗೆ ನೆರವಾಗುವುದೇ ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ₹12,000 ಕೋಟಿ ಹೊರೆ ಬೀಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.