ಜಿಲ್ಲೆಯಲ್ಲಿ 1,946 ಮತಗಟ್ಟೆ, 11,495 ಚುನಾವಣಾ ಸಿಬ್ಬಂದಿ

7
ಸುಗಮ, ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಜಿಲ್ಲೆಯಲ್ಲಿ 1,946 ಮತಗಟ್ಟೆ, 11,495 ಚುನಾವಣಾ ಸಿಬ್ಬಂದಿ

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ 16,32,949 ಮತದಾರರಿದ್ದು, 1,946 ಮತಗಟ್ಟೆಗಳಿವೆ. ಇವುಗಳಿಗೆ 11,495 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್‌. ರಮೇಶ್ ತಿಳಿಸಿದರು.

591 ಕ್ಲಿಷ್ಟಕರ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಮಹಿಳೆಯರೇ ನಿರ್ವಹಿಸುವ 15 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಿಗೆ 105 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿಗೆ 458 ವಾಹನ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಮಿನಿ ಬಸ್‌ಗಳು ಸೇರಿವೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ ₹ 65.47 ಲಕ್ಷ ಮೌಲ್ಯದ 16,612 ಲೀಟರ್‌ ಮದ್ಯ ಜಫ್ತಿ ಮಾಡಲಾಗಿದೆ. ಅಲ್ಲದೇ, ಚೆಕ್‌ಫೋಸ್ಟ್‌ಗಳಿಂದ ₹ 54.44 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ 373 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕಾಂಗ್ರೆಸ್–ಬಿಜೆಪಿ ಪಕ್ಷಗಳ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಉಪಸ್ಥಿತರಿದ್ದರು.

ಮತಗಟ್ಟೆ ಒಳಗೆ ಮೊಬೈಲ್‌ ನಿಷೇಧ

ಮತಗಟ್ಟೆ ಒಳಗೆ ಮೊಬೈಲ್ ನಿಷೇಧಿಸಲಾಗಿದ್ದು, ಮತದಾರರು ಅದನ್ನು ತರುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್‌. ರಮೇಶ್ ತಿಳಿಸಿದ್ದಾರೆ.

ಒಂದು ವೇಳೆ ತಂದರೆ ಮತಗಟ್ಟೆ ಹೊರಗಡೆ ಇರುವ ರಕ್ಷಣಾ ಸಿಬ್ಬಂದಿ ಬಳಿ ಮೊಬೈಲ್‌ ಬಿಟ್ಟು ಹೋಗಬೇಕು ಎಂದು ಅವರು ತಿಳಿಸಿದರು.

ಮತದಾನ ಮಾಡಿದವರು ವಿ.ವಿ ಪ್ಯಾಟ್‌ನಲ್ಲಿ ಕಾಣಿಸುವ ಮತದಾನ ಚೀಟಿಯ ಫೋಟೊ ತೆಗೆಯುವ ಸಾಧ್ಯತೆ ಇರುವುದರಿಂದ ಮೊಬೈಲ್‌ ನಿಷೇಧಿಸಬೇಕು ಎಂದು ಮತಗಟ್ಟೆ ಅಧಿಕಾರಿಗಳು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಕ್ಷೇತ್ರ                      ಮಸ್ಟರಿಂಗ್ ಕೇಂದ್ರ

ದಾವಣಗೆರೆ ಉತ್ತರ         ಡಿಆರ್‌ಎಂ ಪಾಲಿಟೆಕ್ನಿಕ್‌ ಕಾಲೇಜು

ದಾವಣಗೆರೆ ದಕ್ಷಿಣ          ಯುಬಿಡಿಟಿ ಕಾಲೇಜು

ಮಾಯಕೊಂಡ             ಮೋತಿ ವೀರಪ್ಪ ಹೈಸ್ಕೂಲ್‌

* ಈ ಸ್ಥಳಗಳಲ್ಲಿ ಮತಗಟ್ಟೆ ಸಿಬ್ಬಂದಿ ಮೇ 11ರಂದು ಬೆಳಿಗ್ಗೆ 8ಕ್ಕೆ ಹಾಜರಿರಬೇಕು ಎಂದು ಅಧಿಕಾರಿ ಬಿ. ವಿನಾಯಕ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry