ಬುಧವಾರ, ಮಾರ್ಚ್ 3, 2021
31 °C

ನೇಪಾಳವಿಲ್ಲದೆ ಭಾರತದ ಇತಿಹಾಸ, ನಂಬಿಕೆ, ರಾಮ ಅಪೂರ್ಣ : ಪ್ರಧಾನಿ ಮೋದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನೇಪಾಳವಿಲ್ಲದೆ ಭಾರತದ ಇತಿಹಾಸ, ನಂಬಿಕೆ, ರಾಮ ಅಪೂರ್ಣ : ಪ್ರಧಾನಿ ಮೋದಿ

ಜನಕಪುರ(ನೇಪಾಳ) : ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ನೇಪಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 

ಮೋದಿ ಪ್ರಧಾನಿಯಾದ ಬಳಿಕ ನೇಪಾಳಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ನೇಪಾಳದಲ್ಲಿ ರಚನೆಯಾಗಿರುವ ಹೊಸ ಸರ್ಕಾರದೊಂದಿಗಿನ ಮೊದಲ ಮಾತುಕತೆ ಇದು. 

ನೇಪಾಳದ ಅಭಿವೃದ್ಧಿಯ ಕುರಿತು ಪ್ರಧಾನಿ ಮೋದಿ ಮಾತನಾಡುತ್ತ, ‘ಎಲ್ಲರೊಂದಿಗೆ, ಎಲ್ಲರ ವಿಕಾಸವೆಂದು(ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌) ನಾನು ಹೇಳುವಾಗ, ಅದರಲ್ಲಿ ಭಾರತ ಮಾತ್ರ ಸೇರುವುದಿಲ್ಲ. ಜತೆಗೆ ನೆರೆಹೊರೆಯ ದೇಶಗಳು ಒಳಗೊಂಡಿರುತ್ತವೆ. ನೆರೆಯ ದೇಶಗಳೂ ಅಭಿವೃದ್ಧಿಯಾಗಲೆಂದು ನಾನು ಸದಾ ಆಶಿಸುತ್ತೇನೆ. ನೇಪಾಳ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ನನಗೆ ಸಂತೋಷವಿದೆ’ ಎಂದರು. 

‘ದೈವಸ್ವರೂಪಿ ಸೀತೆಯ ಜನ್ಮಸ್ಥಳಕ್ಕೆ ಭೇಟಿನೀಡಿ ಪ್ರಾರ್ಥಿಸಬೇಕು ಎಂಬುದು ನನ್ನ ಬಹುದಿನಗಳ ಬೇಡಿಕೆಯಾಗಿತ್ತು. ಇಂದು ಆ ಅವಕಾಶ ಕೂಡಿ ಬಂದಿರುವುದಕ್ಕೆ ನನಗೆ ಸಂತಸವಾಗಿದೆ’ ಎಂದು ಜನಕಪುರದ ಭೇಟಿ ಬಳಿಕ ಮಾತನಾಡಿದರು.  

‘ಭಾರತ ಮತ್ತು ನೇಪಾಳದ ಜನರು ಪರಸ್ಪರ ಗೌರವ ಭಾವ ಹೊಂದಿದ್ದಾರೆ. ನೇಪಾಳ ಹಲವಾರು ದಶಕಗಳಿಂದ ಅಧ್ಯಾತ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ದೇಶದ ಹೊರತು, ಭಾರತದ ನಂಬಿಕೆಗಳು ಅಪೂರ್ಣವಾಗಲಿವೆ’ ಎಂದು ಎರಡು ದೇಶಗಳ ನಡುವಿನ ಸಂಬಂಧ ಬಲಪಡಿಸುವ ಮಾತುಗಳನ್ನು ಆಡಿದರು. 

ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಸೀತೆಯ ಜನ್ಮಸ್ಥಳ ಜನಕಪುರದಿಂದ ರಾಮನ ಜನ್ಮಸ್ಥಳ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಸ್‌ ಸೇವೆಗೆ ಚಾಲನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.