ಮೇ 22ರಂದು ಮಹಿಳಾ ಟ್ವೆಂಟಿ–20 ಪ್ರದರ್ಶನ ಪಂದ್ಯ

7

ಮೇ 22ರಂದು ಮಹಿಳಾ ಟ್ವೆಂಟಿ–20 ಪ್ರದರ್ಶನ ಪಂದ್ಯ

Published:
Updated:
ಮೇ 22ರಂದು ಮಹಿಳಾ ಟ್ವೆಂಟಿ–20 ಪ್ರದರ್ಶನ ಪಂದ್ಯ

ನವದೆಹಲಿ: ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ಪ್ರದರ್ಶನ ಪಂದ್ಯವನ್ನು ಮೇ 22ರಂದು ಮುಂಬೈನಲ್ಲಿ ಆಡಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಮಹಿಳೆಯರ ಐಪಿಎಲ್‌ ಪಂದ್ಯಗಳನ್ನು ನಡೆಸಬೇಕೆಂಬ ಚರ್ಚೆಯ ನಡುವೆ ಐಪಿಎಲ್‌ ಆಡಳಿತ ಮಂಡಳಿಯು ಈ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದೆ.

ಈ ಪಂದ್ಯದಲ್ಲಿ ಭಾರತ ಹಾಗೂ ವಿದೇಶದ ಪ್ರಮುಖ ಆಟಗಾರ್ತಿಯರು ಆಡಲಿದ್ದಾರೆ. 20 ಭಾರತೀಯ ಹಾಗೂ 10 ವಿದೇಶಿ ಆಟಗಾರ್ತಿಯರು ಈ ಪಂದ್ಯಕ್ಕಾಗಿ ಮುಂಬೈನ ಕ್ರಿಕೆಟ್‌ ಕ್ಲಬ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನಿಂದ ಮಹಿಳಾ ಕ್ರಿಕೆಟಿಗರು ಬರುವ ನಿರೀಕ್ಷೆ ಇದೆ.

ಐಪಿಎಲ್‌ ಇಲೆವನ್‌ ಹಾಗೂ ಬಿಸಿಸಿಐ ಇಲೆವನ್‌ ತಂಡಗಳ ನಡುವೆ ಈ ಹಣಾಹಣಿ ನಡೆಯಲಿದೆ. ಐಪಿಎಲ್‌ ನಿಯಮಾವಳಿಯ ‍ಪ್ರಕಾರ ತಂಡದಲ್ಲಿ ಭಾರತದ ಏಳು ಹಾಗೂ ವಿದೇಶದ ನಾಲ್ವರು ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry