ಭಾನುವಾರ, ಮಾರ್ಚ್ 7, 2021
19 °C

ಬೆಂಗಳೂರಿನ ಮತಗಟ್ಟೆಗಳಲ್ಲಿ ಗಮನಸೆಳೆದ ಸಿನಿತಾರೆಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಮತಗಟ್ಟೆಗಳಲ್ಲಿ ಗಮನಸೆಳೆದ ಸಿನಿತಾರೆಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು

ಬೆಂಗಳೂರು: ನಗರದ ಮತಗಟ್ಟೆಗಳಲ್ಲಿ ಶನಿವಾರ ಸಿನಿಮಾ ತಾರೆಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮತ ಚಲಾಯಿಸುವ ಮೂಲಕ ಗಮನ ಸೆಳೆದರು.

ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

ಸದಾಶಿವನಗರದ ಪೂರ್ಣಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ಮತ ಚಲಾಯಿಸಿದ ನಟ ಪುನೀತ್ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ವಿನಯ್ ರಾಜಕುಮಾರ್.

ಪದ್ಮನಾಭನಗರ ಕ್ಷೇತ್ರದಲ್ಲಿರುವ ಹೊಸಕೆರೆಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ ನಟ ಯಶ್

ಕತ್ರಿಗುಪ್ಪೆಯ ಸರ್ಕಾರಿ ಶಾಲೆಯೊಂದರಲ್ಲಿ ನಟ ದುನಿಯಾ ವಿಜಯ್ ಮತದಾನ ಮಾಡಿ, ಶಾಯಿ ಹಾಕಿಸಿಕೊಂಡ ಗುರುತು ತೋರಿಸಿದರು

ನಟ ರಮೇಶ್ ಅರವಿಂದ ಅವರು ಮೊದಲಬಾರಿ ಮತದಾನ ಮಾಡಿದ ಮಗಳು ನಿಹಾರಿಕಾ ರೊಂದಿಗೆ

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಲ್ಕೆರೆ ಮತಗಟ್ಟೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಜತೆಗೆ ಸ್ವಂತೀ ತೆಗೆಸಿಕೊಂಡ ಅಭಿಮಾನಿಗಳು

ಸದಾಶಿವನಗರದ ಪೂರ್ಣಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ಶನಿವಾರ ನಟ ತರುಣ್‌ ಮತ ಚಲಾಯಿಸಿದರು.

ವಿಜಯನಗರದಲ್ಲಿ ಹಿರಿಯ ಸಾಹಿತಿ ಎಂ.ಚಿದಾನಂದಮೂರ್ತಿ ಅವರು ಮತ ಚಲಾಯಿಸಿದರು.

ಕತ್ರಿಗುಪ್ಪೆಯಲ್ಲಿರುವ 'ಬಿಟಿಎಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಶಾಲೆಯಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ಅವರ ಪತ್ನಿ ಸತ್ಯಭಾಮಾ ಕಂಬಾರ ಮತ ಹಾಕಿದರು -ಪ್ರಜಾವಾಣಿ ಚಿತ್ರಗಳು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.