ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕಿಯಾಗಿ ರಾಬ್ಡಿದೇವಿ

7

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕಿಯಾಗಿ ರಾಬ್ಡಿದೇವಿ

Published:
Updated:
ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕಿಯಾಗಿ ರಾಬ್ಡಿದೇವಿ

ಪಟ್ನಾ: ಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿಯಾಗಿ ಆರ್‌ಜೆಡಿಯ ರಾಬ್ಡಿದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಮೇಲ್ಮನೆಯಲ್ಲಿ ಪಕ್ಷದ ಸಂಖ್ಯಾಬಲ ಹೆಚ್ಚಿದ ಕಾರಣ ಅವರಿಗೆ ಈ ಸ್ಥಾನ ದೊರೆತಿದೆ. ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಏಳರಿಂದ ಒಂಭತ್ತಕ್ಕೆ ಏರಿಕೆಯಾಗಿದೆ.

ವಿರೋಧ ಪಕ್ಷದ ಸ್ಥಾನ ನೀಡುವಂತೆ ರಾಬ್ಡಿದೇವಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲಾಗಿದೆ ಎಂದು ಪರಿಷತ್ತಿನ ಉಪ ಸಭಾಪತಿ ಹರೂನ್ ರಷೀದ್ ತಿಳಿಸಿದ್ದಾರೆ.

ಕಳೆದ ವರ್ಷ ಮಹಾಮೈತ್ರಿಕೂಟದಿಂದ ನಿತೀಶ್ ಕುಮಾರ್ ಹೊರನಡೆದ ನಂತರ ಆರ್‌ಜೆಡಿ ವಿರೋಧ ಪಕ್ಷದ ನಾಯಕನ ಸ್ಥಾನ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಪರಿಷತ್ತಿನ ಒಟ್ಟು ಸದಸ್ಯ ಬಲದಲ್ಲಿ ಆರ್‌ಜೆಡಿ ಶೇ 10ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿತ್ತು. ವಿಧಾನಸಭೆಯಲ್ಲಿ ರಾಬ್ಡಿದೇವಿ ಅವರ ಮಗ ತೇಜಸ್ವಿ ಯಾದವ್ ವಿರೋಧಪಕ್ಷದ ನಾಯಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry