ಸೋಮವಾರ, ಮಾರ್ಚ್ 8, 2021
24 °C
ಮಹಿಳಾ ಮತದಾರರರಿಗೆ ಹೊಸ ಅನುಭವ ಕೊಟ್ಟ ಪಿಂಕ್ ಮತಗಟ್ಟೆ

ಮತಚಲಾಯಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ ಸಖಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಚಲಾಯಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ ಸಖಿ!

ಶಿರ್ವ: ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ವಿಶೇಷಗಳಿಂದ ಕೂಡಿದ್ದು, ಅದರ ಒಂದು ಭಾಗವಾಗಿದ್ದ ‘ಸಖಿ ಪಿಂಕ್ ಮತಗಟ್ಟೆ’ ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾಮದ ಮಹಿಳಾ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಅತಿಹೆಚ್ಚು ಮಹಿಳಾ ಮತದಾರ ರನ್ನು ಹೊಂದಿರುವ ಕುರ್ಕಾಲು ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ ಗ್ರಾಮಿಣ ಪ್ರದೇಶದ ಹಿರಿಯ, ಕಿರಿಯ ಮಹಿಳಾ ಮತದಾರರು ಶನಿವಾರ ಲವಲವಿಕೆಯಿಂದ ತಮ್ಮ ಮತ ದಾನದ ಹಕ್ಕು ಚಲಾಯಿಸಿದರು. ಒಟ್ಟಾರೆಯಾಗಿ ಗ್ರಾಮೀಣ ಮಹಿಳಾ ಮತದಾರರಿಗೆ ಈ ಚುನಾವಣೆಯಲ್ಲಿನ ಹೊಸ ಅನುಭವ ಮುದನೀಡಿತು.

ಉಡುಪಿ ಜಿಲ್ಲೆಯಲ್ಲಿ ಮಹಿಳೆಯರಿ ಗಾಗಿ ಒಟ್ಟು 10 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಕಾಪು ಕ್ಷೇತ್ರದ ಕುರ್ಕಾಲಿನಲ್ಲಿ ಒಂದು, ಉಡುಪಿ ಕ್ಷೇತ್ರ ದಲ್ಲಿ ಐದು, ಕಾರ್ಕಳ ಕ್ಷೇತ್ರದಲ್ಲಿ ಎರಡು ಹಾಗೂ ಕುಂದಾಪುರ, ಬೈಂದೂರು ಕ್ಷೇತ್ರಗಳಲ್ಲಿ ತಲಾ ಒಂದೊಂದು ಪಿಂಕ್ ಮತಗಟ್ಟೆಯನ್ನು ವಿಶೇಷವಾಗಿ ರೂಪುಗೊಳಿಸಲಾಗಿತ್ತು.

ಪ್ರಥಮ ಮತದಾರರಿಗೆ ವಿಶೇಷ ಉಡುಗೊರೆ: ಕುರ್ಕಾಲಿನ ಪಿಂಕ್ ಮತಗ ಟ್ಟೆಯಲ್ಲಿ 18ರಿಂದ 20 ವರ್ಷದೊಳಗಿನ ಒಟ್ಟು 21 ಯುವತಿಯರು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಇದೇ ಮೊದಲಬಾರಿಗೆ ವೋಟ್‌ ಮಾಡಿದ ಯುವತಿಯರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಿದ್ದು ವಿಶೇಷ ವಾಗಿತ್ತು. ಈ ಮತದಾನ ಕೇಂದ್ರಕ್ಕೆ ವೋಟ್‌ ಮಾಡಲು ಬಂದಿದ್ದ ಮಹಿಳೆ ಯರ ಪುಟ್ಟ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಸ್ಥಳಾವಕಾಶ  ಕಲ್ಪಿಸಲಾಗಿತ್ತು. ಅಲ್ಲಿ ಸಣ್ಣಪುಟ್ಟ ಆಟದ ಸಾಮಗ್ರಿಗಳನ್ನು ಇಟ್ಟಿದ್ದರಿಂದ ಪುಟ್ಟ ರಚ್ಚೆ ಮಾಡದೇ

ಆಟ ವಾಡುತ್ತಿದ್ದ ದೃಶ್ಯ ಗಮನ ಸೆಳೆಯಿತು.

ಸೆಲ್ಫಿ ಜೋನ್: ಮತದಾನ ಕೇಂದ್ರದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸೆಲ್ಫಿ ಜೋನ್‌ನಲ್ಲಿ ಮತದಾನ ಮಾಡಿದ ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದರು. ಅನೇಕ ಮಹಿಳೆಯರ ವಾಟ್ಸ್‌ಆ್ಯಪ್‌ ಪ್ರೊಫೈಲ್ ಮತ್ತು ಸ್ಟೇಟಸ್‌ಗಳಲ್ಲಿ ಸಖಿ ಸೆಲ್ಫಿ ಜೋನ್‌ನಲ್ಲಿ ಕ್ಲಿಕ್ಕಿಸಿದ ಚಿತ್ರಗಳು ರಾರಾಜಿ ಸುತ್ತಿರುವುದು ಕಂಡುಬಂತು.

ಮಹಿಳೆಯರಿಂದ ಶಿಸ್ತುಬದ್ಧ ಮತದಾನ

‘ಗ್ರಾಮೀಣ ಪ್ರದೇಶವಾದ ಕುರ್ಕಾಲು ಮತಗಟ್ಟೆಯಲ್ಲಿ ಅಳವಡಿಸಲಾಗಿದ್ದ ಸಖಿ ಪಿಂಕ್ ಮತಗಟ್ಟೆಯಲ್ಲಿ ಮಹಿಳೆಯರು ಶಿಸ್ತುಬದ್ಧವಾಗಿ ಮತದಾನ ಮಾಡಿ ಗಮನ ಸೆಳೆದರು. ಹೆಚ್ಚಿನ ಮಹಿಳೆಯರಿಗೆ ಹೊಸ ಅನುಭವವನ್ನು ಕೊಟ್ಟ ಈ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಿದ್ದು ಗ್ರಾಮಸ್ಥರ ಕುತೂಹಲವನ್ನು ಕೆರಳಿಸಿತ್ತು. ಒಟ್ಟು 10 ಮಂದಿ ಸಿಬ್ಬಂದಿ ಪಿಂಕ್ ಸಮವಸ್ತ್ರ ಧರಿಸಿ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ’ ಎಂದು ಕುರ್ಕಾಲು ಪಿಂಕ್ ಮತಗಟ್ಟೆ ನೋಡಲ್ ಅಧಿಕಾರಿ ಗ್ರೇಸಿ ಗೋನ್ಸಾಲ್ವಿಸ್ ಅಭಿಪ್ರಾಯಪಟ್ಟರು.

**

ಪಿಂಕ್ ಮತಗಟ್ಟೆಯಿಂದಾಗಿ ಮಹಿಳೆಯರು ಆತಂಕವಿಲ್ಲದೆ ಮತದಾನ ಮಾಡಲು ಬರುವಂತಾಗಿದೆ. ನಮ್ಮಂತಹ ಹೊಸ ಮತದಾರರಿಗೆ ಈ ವ್ಯವಸ್ಥೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ

– ಅನುರಾಧ ರಾಜೇಂದ್ರ, ಗೃಹಿಣಿ

**

ನಿಜಕ್ಕೂ ಇದೊಂದು ಹೊಸ ಪರಿಕಲ್ಪನೆಯಾಗಿದ್ದು ಮಹಿಳೆಯರಿಗೆ ಅನುಕೂಲವಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಇಂತಹದೊಂದು ವ್ಯವಸ್ಥೆ ಇದ್ದರೆ ಉತ್ತಮ

–  ಉಮಾಶ್ರೀ ಗುರುರಾಜ್,  ಗೃಹಿಣಿ 

ಪ್ರಕಾಶ ಸುವರ್ಣ ಕಟಪಾಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.