ಚರ್ಚ್‌ಗಳ ಮೇಲೆ ದಾಳಿ:11 ಬಲಿ

7

ಚರ್ಚ್‌ಗಳ ಮೇಲೆ ದಾಳಿ:11 ಬಲಿ

Published:
Updated:

ಸುರಬಯ, ಇಂಡೊನೇಷ್ಯಾ: ಆತ್ಮಾಹುತಿ ಬಾಂಬರ್‌ಗಳು ಇಲ್ಲಿನ ಮೂರು ಚರ್ಚ್‌ಗಳ ಮೇಲೆ ಭಾನುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟು, 41 ಮಂದಿ ಗಾಯಗೊಂಡಿದ್ದಾರೆ.

‘ಇಬ್ಬರು ಮಕ್ಕಳ ಜೊತೆಗಿದ್ದ ಮಹಿಳೆ ಸೇರಿದಂತೆ ಆರು ಆತ್ಮಾಹುತಿ ಬಾಂಬರ್‌ಗಳು ಈ ದಾಳಿ ನಡೆಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಸುರಬಯದ ಸಂತ ಮರಿಯಾ ರೋಮನ್ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಮೊದಲ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ದಾಳಿಕೋರರು ಸೇರಿದ್ದಾರೆ ಎಂದಿದ್ದಾರೆ.

ಡಿಪೋನೆಗೊರೊದ ಚರ್ಚ್‌ನಲ್ಲಿ ಎರಡನೇ ದಾಳಿ ಹಾಗೂ ಪೆಂಟಕೋಸ್ಟಾದ ಚರ್ಚ್‌ನಲ್ಲಿ ಮೂರನೇ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದಾಳಿಕೋರರು ಒಂದೇ ಕುಟುಂಬದವರು’: ಐಎಸ್ ಬೆಂಬಲಿತ ಸ್ಥಳೀಯ ಉಗ್ರ ಸಂಘಟನೆ ಜಮಾ ಅನ್ಶರುತ್‌ ದೌಲಾ ಜೊತೆ ಸಂಪರ್ಕ ಹೊಂದಿದ್ದ ಒಂದೇ ಕುಟುಂಬದವರು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry