ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಬಂಧನ

7

ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಬಂಧನ

Published:
Updated:
ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಬಂಧನ

ಹುಬ್ಬಳ್ಳಿ: ಮಗುವಿಗೆ ಪ್ರವೇಶ ನೀಡಲು ₹ 50 ಸಾವಿರ ಲಂಚ ಕೇಳಿದ ಆರೋಪದ ಮೇಲೆ, ಇಲ್ಲಿನ ರಾಜನಗರ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸಿದ್ಧಾರೂಢ ಟಿ. ಮೇತ್ರೆ ಅವರನ್ನು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಪಂಜಾಬ್‌ನ ಭಟಿಂಡಾದಲ್ಲಿ ಯೋಧರಾಗಿರುವ ಹುಬ್ಬಳ್ಳಿಯ ಬಸವರಾಜ ಸಣ್ಣಪೂಜಾರ ಅವರಿಗೆ ಇತ್ತೀಚೆಗೆ ಜಮ್ಮು–ಕಾಶ್ಮೀರಕ್ಕೆ ವರ್ಗಾವಣೆಯಾಗಿತ್ತು. ಹೀಗಾಗಿ, ಭಟಿಂಡಾದ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದ ಮಗ ಚೇತನ್‌ಗೆ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಓದಿಸಲು ತೀರ್ಮಾನಿಸಿ ವರ್ಗಾವಣೆ ಪತ್ರವನ್ನೂ ತಂದಿದ್ದರು. ಆ ಪತ್ರದೊಂದಿಗೆ ಮೇತ್ರೆ ಅವರನ್ನು ಭೇಟಿಯಾದಾಗ, ‘ಶಾಲೆಗೆ ಪ್ರವೇಶ ಕೊಡಬೇಕು ಎಂದರೆ ₹50 ಸಾವಿರ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಇಷ್ಟು ಕೊಡಲು ಸಾಧ್ಯ ಇಲ್ಲ ಎಂದು ಬಸವರಾಜ ಹೇಳಿದ ನಂತರವೂ ಅವರು ಪ್ರವೇಶ ನೀಡಲು ಒಪ್ಪಲಿಲ್ಲ.

ಅಂತಿಮವಾಗಿ ಮಿಲಿಟರಿ ಕ್ಯಾಂಟೀನ್‌ನಿಂದ ಐದು ಮದ್ಯದ ಬಾಟಲಿ ಹಾಗೂ ಒಂದು ಮಿಕ್ಸರ್‌ ಗ್ರೈಂಡರ್‌ ತಂದುಕೊಡುವಂತೆ ಮೇತ್ರೆ ಸಲಹೆ ನೀಡಿದ್ದರು. ಈ ಬಗ್ಗೆ, ಬಸವರಾಜ ಅವರು ಸಿಬಿಐಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry