ಫ್ಲಿಪ್‌ಕಾರ್ಟ್ ಸ್ವಾಧೀನ: ವಾಲ್‌ಮಾರ್ಟ್‌ಗೆ ಲಾಭ

ಹೈದರಾಬಾದ್: ಫ್ಲಿಪ್‌ಕಾರ್ಟ್ ಸ್ವಾಧೀನವು ಅಮೆರಿಕದ ರಿಟೇಲ್ ದೈತ್ಯ ಸಂಸ್ಥೆ ವಾಲ್‌ಮಾರ್ಟ್ ಪಾಲಿಗೆ ಲಾಭದಾಯಕವಾಗಿರಲಿದೆ ಎಂದು ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಮೂಡೀಸ್ ಅಂದಾಜಿಸಿದೆ.
ಫ್ಲಿಪ್‌ಕಾರ್ಟ್ ಇನ್ನೂ ಕೆಲ ವರ್ಷಗಳ ಕಾಲ ನಷ್ಟದಲ್ಲಿ ಮುಂದುವರೆಯಲಿದೆ. ಹೀಗಾಗಿ ಆರಂಭದಲ್ಲಿ ಇದು ವಾಲ್‌ಮಾರ್ಟ್‌ನ ವರಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ, ಭಾರತದಲ್ಲಿನ ಅತಿದೊಡ್ಡ ಇ–ಕಾಮರ್ಸ್ ಮಾರುಕಟ್ಟೆ ಮೇಲೆ ಹಿಡಿತ ಹೊಂದಲು ವಾಲ್‌ಮಾರ್ಟ್‌ಗೆ ಇದರಿಂದ ಸಾಧ್ಯವಾಗಲಿದೆ. ಇದು ಭವಿಷ್ಯದಲ್ಲಿ ಲಾಭದಾಯಕವಾಗಿರಲಿದೆ.
ಭಾರತದ ಆರ್ಥಿಕತೆ ಶೇ 7ರಷ್ಟು ಪ್ರಗತಿ ದಾಖಲಿಸಲಿದೆ. 40 ಕೋಟಿಗಿಂತ ಹೆಚ್ಚಿಗೆ ಇರುವ ಯುವ ಜನತೆ ಮತ್ತು ಹೆಚ್ಚುತ್ತಿರುವ ಮಧ್ಯಮ ವರ್ಗ, ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿನ ಹೆಚ್ಚಳದಿಂದ ಇ–ಕಾಮರ್ಸ್ ವಹಿವಾಟು ಗಣನೀಯ ಪ್ರಗತಿ ದಾಖಲಿಸಲಿದೆ.
‘ಫ್ಲಿಪ್‌ಕಾರ್ಟ್ ಇನ್ನೂ ಕೆಲ ವರ್ಷಗಳವರೆಗೆ ನಷ್ಟದಲ್ಲಿ ನಡೆಯಲಿದ್ದರೂ, ಸ್ವಾಧೀನ ಪ್ರಕ್ರಿಯೆಯು ವಾಲ್‌ಮಾರ್ಟ್‌ನ ಪಾಲಿಗೆ ಭವಿಷ್ಯದ ಹೂಡಿಕೆಯಾಗಿದೆ’ ಎಂದು ಮೂಡೀಸ್‌ನ ಉಪಾಧ್ಯಕ್ಷ ಚಾರ್ಲಿ ಒಶೆಯಾ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.