ಬಾದಾಮಿಯಲ್ಲಿ ನೈತಿಕವಾಗಿ ಗೆಲುವು ನನ್ನದೆ: ಶ್ರೀರಾಮುಲು

7
ಬಾವುಕರಾದ ಶ್ರೀರಾಮುಲು

ಬಾದಾಮಿಯಲ್ಲಿ ನೈತಿಕವಾಗಿ ಗೆಲುವು ನನ್ನದೆ: ಶ್ರೀರಾಮುಲು

Published:
Updated:
ಬಾದಾಮಿಯಲ್ಲಿ ನೈತಿಕವಾಗಿ ಗೆಲುವು ನನ್ನದೆ: ಶ್ರೀರಾಮುಲು

ಬಾಗಲಕೋಟೆ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿ  ಶ್ರೀರಾಮುಲು 1797 ಮತಗಳ ಅಂತರದಿಂದ ಸೋಲನ್ನು ಅಪ್ಪಿದ್ದು, ಬಾಗಲಕೋಟೆಯಲ್ಲಿ ನಾನು ಸೋತಿದ್ದರು ಇದು ನನ್ನ ನೈತಿಕ ಗೆಲುವು ಎಂದು ಹೇಳಿಕೆ ನೀಡಿದ್ದಾರೆ.

ಬಾದಾಮಿಯಲ್ಲಿ ಸಿದ್ದರಾಮಯ್ಯರ ಗೆಲುವು ಗೆಲುವು ಅಲ್ಲ.. ನನ್ನದು ನೈತಿಕ ಗೆಲುವು. ನನ್ನ  ಸೋಲಿಗೆ  ಜೆಡಿಎಸ್  ಹೆಚ್ಚು  ಮತ ತಗೆದುಕೊಂಡಿದ್ದೆ ಕಾರಣ. ಜೆಡಿಎಸ್  ಅಭ್ಯರ್ಥಿ ಬಾದಾಮಿಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದರು.

ಬಾದಾಮಿಯಿಂದ ನಾನು ಗೆಲ್ಲಬೇಕೆನ್ನುವ ಆಸೆಯಿತ್ತು. ಸೋತಿರೋದಕ್ಕೆ ಭಾವುಕನಾದೆ ಅಷ್ಟೇ. ಬಾಗಲಕೋಟೆ  ಜಿಲ್ಲೆಯಲ್ಲಿ ಬಿಜೆಪಿ  ಜಯ ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ  ಅಧಿಕಾರದ ಗದ್ದುಗೆ ಏರಲಿದೆ. ನಾನು ಬಾದಾಮಿಯಲ್ಲಿ ಸೋಲನ್ನು ಕಂಡಿರಬಹುದು ಆದರೆ ಆಗಾಗ ಬಾದಾಮಿಗೆ ಭೇಟಿ ನೀಡುವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry