ಮುಕ್ತಿ ಎಂದು?

7

ಮುಕ್ತಿ ಎಂದು?

Published:
Updated:

‘ಮೈಶುಗರ್’ ಕಾರ್ಖಾನೆ ಮಂಡ್ಯ ಜಿಲ್ಲೆಯ ಜೀವನಾಡಿಯಂತಿತ್ತು. ಅದನ್ನು ನಂಬಿ ಜೀವನ ನಡೆಸುತ್ತಿದ್ದವರಿಗೆ ಕಾರ್ಖಾನೆಯು ಅನ್ನ ನೀಡುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿವೆ. ರೈತರ ಉದ್ಧಾರ, ಏಳಿಗೆ, ಮತ್ತೊಂದು– ಮಗದೊಂದು ಎಂದು ರೈತರ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಗಳಿಸಿದ ಪಕ್ಷಗಳೆಷ್ಟೋ ನಾ ತಿಳಿಯೆ. ಆದರೆ ಯಾವ ಪಕ್ಷವೂ ಆ ಕಡೆ ಗಮನ ಹರಿಸದಿದ್ದುದು ದುರಂತವೇ ಸರಿ. ನಮ್ಮ ರೈತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಸಾಲ ಮನ್ನಾ ಎಂಬ ಯೋಜನೆಯಿಂದ ರೈತರಿಗೆ ಯಾವ ರೀತಿಯಲ್ಲೂ ಶಾಶ್ವತ ಪರಿಹಾರ ದೊರಕದು.

ಮಂಡ್ಯ ಕ್ಷೇತ್ರದಿಂದ ಆರಿಸಿ ಬಂದ ಶಾಸಕರು ಇನ್ನಾದರೂ ಈ ಕಾರ್ಖಾನೆಯ ಕಡೆಗೆ ಗಮನ ಹರಿಸಬೇಕು. ಇದು ಈ ಕ್ಷೇತ್ರದ ಮತದಾರನ ಆಜ್ಞೆಯೂ ಹೌದು.

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry