ಪುಣೇರಿ ತಂಡಕ್ಕೆ ಅಶಾನ್‌ ಕೋಚ್‌

7

ಪುಣೇರಿ ತಂಡಕ್ಕೆ ಅಶಾನ್‌ ಕೋಚ್‌

Published:
Updated:
ಪುಣೇರಿ ತಂಡಕ್ಕೆ ಅಶಾನ್‌ ಕೋಚ್‌

ಪುಣೆ: ಅಶಾನ್‌ ಕುಮಾರ್‌ ಅವರು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ವಿಷಯವನ್ನು ಪುಣೇರಿ ಫ್ರಾಂಚೈಸ್‌ ಮಂಗಳವಾರ ಪ್ರಕಟಿಸಿದೆ.

ಅಶಾನ್‌ ಅವರು ಈ ಹಿಂದೆ ಭಾರತ ಕಬಡ್ಡಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡ ಬೀಜಿಂಗ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟ, ದಕ್ಷಿಣ ಏಷ್ಯನ್‌ ಕ್ರೀಡಾಕೂಟ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿತ್ತು. 1999ರಲ್ಲಿ ಅಶಾನ್ ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿತ್ತು.

ಅಶಾನ್‌ ಅವರು ಸರ್ವಿಸಸ್‌, ನಾಸಿಕ್‌ ಆರ್ಮಿ ಸ್ಪೋರ್ಟ್ಸ್‌ ಯೂನಿಟ್‌ ಮತ್ತು ಹರಿಯಾಣ ತಂಡಗಳ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

‘ಪುಣೇರಿ ತಂಡದ ಕೋಚ್‌ ಆಗಿ ನೇಮಕವಾಗಿರುವುದಕ್ಕೆ ಅತೀವ ಖುಷಿಯಾಗಿದೆ. ಈ ಬಾರಿ ಲೀಗ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ತಂಡವನ್ನು ಸಜ್ಜುಗೊಳಿಸುವ ಜವಾಬ್ದಾರಿ ನನ್ನ ಮೇಲಿದ್ದು ಅದನ್ನು ಯಶಸ್ವಿಗಾಗಿ ನಿಭಾಯಿಸುತ್ತೇನೆ’ ಎಂದು ಅಶಾನ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry