ಕೆಕೆಆರ್‌ ಪ್ಲೇ ಆಫ್‌ ಹಾದಿ ಸುಗಮ

7

ಕೆಕೆಆರ್‌ ಪ್ಲೇ ಆಫ್‌ ಹಾದಿ ಸುಗಮ

Published:
Updated:
ಕೆಕೆಆರ್‌ ಪ್ಲೇ ಆಫ್‌ ಹಾದಿ ಸುಗಮ

ಕೋಲ್ಕತ್ತ: ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್ ಯಾದವ್‌ (20ಕ್ಕೆ4) ಅವರ ಸ್ಪಿನ್‌ ಮೋಡಿಯ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೋಲಿಸಿದೆ. ಇದರೊಂದಿಗೆ ‘ಪ್ಲೇ ಆಫ್‌’ ಪ್ರವೇಶಿಸುವ ಹಾದಿಯನ್ನು ಸುಗಮ ಮಾಡಿಕೊಂಡಿದೆ.

ಈಡನ್ ಗಾರ್ಡನ್ಸ್‌ ಅಂಗಳದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಜಿಂಕ್ಯ ರಹಾನೆ ಸಾರಥ್ಯದ ರಾಯಲ್ಸ್‌ 19 ಓವರ್‌ಗಳಲ್ಲಿ 142ರನ್‌ಗಳಿಗೆ ಆಲೌಟ್‌ ಆಯಿತು. ಸವಾಲಿನ ಗುರಿ ಬೆನ್ನಟ್ಟಿದ ದಿನೇಶ್‌ ಕಾರ್ತಿಕ್‌ ನೇತೃತ್ವದ ನೈಟ್‌ ರೈಡರ್ಸ್‌ 18 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ಕೆಕೆಆರ್‌, ಸುನಿಲ್‌ ನಾರಾಯಣ್‌ (21; 7ಎ, 2ಬೌಂ, 2ಸಿ) ವಿಕೆಟ್‌ ಬೇಗನೆ ಕಳೆದುಕೊಂಡಿತು. ರಾಬಿನ್‌ ಉತ್ತಪ್ಪ (4) ಕೂಡ ವಿಕೆಟ್‌ ನೀಡಲು ಅವಸರಿಸಿದರು!

ಆದರೆ ಕ್ರಿಸ್‌ ಲಿನ್‌ (45; 42ಎ, 5ಬೌಂ, 1ಸಿ) ಮತ್ತು ನಿತೀಶ್‌ ರಾಣಾ (21; 17ಎ, 2ಬೌಂ, 1ಸಿ) ತಾಳ್ಮೆಯ ಆಟ ಆಡಿ ತಂಡದ ಜಯದ ಹಾದಿ ಸುಗಮ ಮಾಡಿದರು. ಇವರು ಔಟಾದ ನಂತರ ಕಾರ್ತಿಕ್‌ (ಔಟಾಗದೆ 41; 31ಎ, 5ಬೌಂ, 1ಸಿ) ಮತ್ತು ಆ್ಯಂಡ್ರೆ ರಸೆಲ್‌ (ಔಟಾಗದೆ 11; 5ಎ, 2ಬೌಂ) ರಾಯಲ್ಸ್‌ ಬೌಲರ್‌ಗಳನ್ನು ಕಾಡಿದರು. ಇವರು ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 28ರನ್‌ ಕಲೆಹಾಕಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್‌ ರಾಯಲ್ಸ್‌: 19 ಓವರ್‌ಗಳಲ್ಲಿ 142 (ರಾಹುಲ್‌ ತ್ರಿಪಾಠಿ 27, ಜೋಸ್‌ ಬಟ್ಲರ್‌ 39, ಜಯದೇವ್‌ ಉನದ್ಕತ್‌ 26; ಕುಲದೀಪ್‌ ಯಾದವ್‌ 20ಕ್ಕೆ4, ಆ್ಯಂಡ್ರೆ ರಸೆಲ್‌ 13ಕ್ಕೆ2).

ಕೋಲ್ಕತ್ತ ನೈಟ್‌ ರೈಡರ್ಸ್‌: 18 ಓವರ್‌ಗಳಲ್ಲಿ 4 ವಿಕೆಟ್‌ಗೆ 145 (ಸುನಿಲ್‌ ನಾರಾಯಣ್‌ 21, ಕ್ರಿಸ್‌ ಲಿನ್‌ 45, ನಿತೀಶ್‌ ರಾಣಾ 21, ದಿನೇಶ್‌ ಕಾರ್ತಿಕ್‌ ಔಟಾಗದೆ 41; ಬೆನ್‌ ಸ್ಟೋಕ್ಸ್‌ 15ಕ್ಕೆ3, ಈಶ್‌ ಸೋಧಿ 21ಕ್ಕೆ1).

ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್‌ಗೆ 6 ವಿಕೆಟ್‌ ಗೆಲುವು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry