ಬುಧವಾರ, ಮಾರ್ಚ್ 3, 2021
19 °C

ದೇವಾನಂದ ಗೆಲುವು: ಜೆಡಿಎಸ್‌ ಕಾರ್ಯಕರ್ತರ ವಿಜಯೋತ್ಸವ

ರಾಜಾ ಪರಶುರಾಮ ನಾಯಕ Updated:

ಅಕ್ಷರ ಗಾತ್ರ : | |

ದೇವಾನಂದ ಗೆಲುವು: ಜೆಡಿಎಸ್‌ ಕಾರ್ಯಕರ್ತರ ವಿಜಯೋತ್ಸವ

ಚಡಚಣ: ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣ ಅವರ ಗೆಲುವು ಹೊರಬೀಳು ತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಶಿವಾನಂದ ವಾಳಿಖಿಚಿಡಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಣಮಂತ ಹೂನಳ್ಳಿ, ‘ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ .ಹೀಗಾಗಿ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತ’ ಎಂದರು.

ಮುಖಂಡ ಚಂದು ಶಿಂಧೆ ಮಾತ ನಾಡಿ, ‘ಕುಮಾರಸ್ವಾಮಿ ನೇತೃತ್ವದಲ್ಲಿ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದಾರೆ. ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ದೇವಾನಂದ ಚವ್ಹಾಣ ಸಚಿವ ಸ್ಥಾನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.

ಮಲ್ಲು ಕಟ್ಟಿಮನಿ ರಾಜೂ ಡೋಣ ಗಾಂವ, ಶಿಕಂದರ್ ಸಾವಳಸಂಗ, ಮುರ್ತುಜ ನಧಾಫ, ಲಾಲಸಾಬ ಅತ್ತಾರ, ಈರಣ್ಣ ಲಾಲಸಂಗಿ, ಮಹ ದೇವ ಶಿಂಧೆ, ಸುಭಾಸ ಶಿಂಧೆ, ಅರ್ಜುನ ಕ್ಷತ್ರಿ, ಅಂಬಾದಾಸ, ಪ್ರವೀಣ ಪಾಟೀಲ, ದೀಪಕ್ ಕದಮ್, ಲಕ್ಷ್ಮಣ ಕ್ಷತ್ರಿ, ಮಹಾದೇವ ವಾಘಮೋರೆ, ಅಣ್ಣಾ ಪೂಜಾರಿ, ಶ್ರೀಶೈಲ ಮಾಳಕೋಟಗಿ, ಪ್ರವೀಣ ಪಾಟೀಲ, ಸಚಿನ ವಾಲಿ, ಪಿಂಟು ಶಿಂಧೆ, ಕಲ್ಲಪ್ಪ ವಾಘಮೋರೆ, ವಿಠ್ಠಲ ಶಿಂಧೆ, ಲಕ್ಷ್ಮಣ ಶಿಂಧೆ, ಸಂಜು ಕ್ಷತ್ರಿ, ದುಂಡಪ್ಪಾ ವಾಘಮೋರೆ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.