ಗೀರುಗಳಿರುವಂಥ, ನಜ್ಜುಗುಜ್ಜಾಗಿರುವಂತೆ ಇರುವ ಕೇಸ್ ಅನ್ನು ಡ್ರೈವಿಂಗ್ ಮಾಡುವಾಗ ನೋಡಿದಾಗ ಎಚ್ಚರಿಕೆ ಗಂಟೆಯಾಗಿ ಕೆಲಸ ಮಾಡುತ್ತದೆಯಂತೆ. ಅದನ್ನು ನೋಡಿದರೆ ಚಾಲಕರು ಮೊಬೈಲ್ ಬಳಸುವುದನ್ನು ತಪ್ಪಿಸುತ್ತಾರೆ ಎಂಬುದು ಇದರ ಹಿಂದಿನ ತರ್ಕ. ಲೋಹದ ಕಲಾಕಾರ ಲೆನ್ನರ್ಟ್ ವಿಂಟರ್ ಮಿರ್ ಜೊತೆಗೂಡಿ ಇಂಥ 153 ಕೇಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮಾರಾಟದಿಂದ ಬಂದ ಲಾಭವನ್ನು, ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ನೆರವಾಗುವ ಟ್ರಾಫಿಕ್ಸ್ಕೇಡ್ಫಾಂಡೆನ್ಗೆ ನೀಡಲಾಗಿದೆ.