ಭಿಕ್ಷಾಟನೆ ಅಪರಾಧ ಹೇಗಾಗುತ್ತದೆ: ಹೈಕೋರ್ಟ್

7

ಭಿಕ್ಷಾಟನೆ ಅಪರಾಧ ಹೇಗಾಗುತ್ತದೆ: ಹೈಕೋರ್ಟ್

Published:
Updated:

ನವದೆಹಲಿ : ಸರ್ಕಾರವು ಆಹಾರ ಹಾಗೂ ಉದ್ಯೋಗ ನೀಡದಿದ್ದಲ್ಲಿ, ಭಿಕ್ಷಾಟನೆಯು ಅಪರಾಧ ಹೇಗಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಭಿಕ್ಷಾಟನೆಯನ್ನು ನ್ಯಾಯಸಮ್ಮತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವ್ಯಕ್ತಿಯೊಬ್ಬ ತನಗೆ ತೀರಾ ಅನಿವಾರ್ಯತೆಯಿದ್ದಾಗ ಮಾತ್ರ ಭಿಕ್ಷಾಟನೆಗೆ ಇಳಿಯುತ್ತಾನೆ. ಅದು ಆತನ ಆಯ್ಕೆಯಾಗಿರುವುದಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಡತನದಿಂದ ಭಿಕ್ಷಾಟನೆ ಮಾಡಿದರೆ ಅದು ಅಪರಾಧವಾಗುವುದಿಲ್ಲ. ಆದರೆ ಭಿಕ್ಷಾಟನೆಯನ್ನು ನ್ಯಾಯಸಮ್ಮತಗೊಳಿಸಬಾರದು ಎಂದು ಕೇಂದ್ರ ಸರ್ಕಾರ ಈ ಮೊದಲು ಹೈಕೋರ್ಟ್‌ಗೆ ತಿಳಿಸಿತ್ತು.

ಭಿಕ್ಷುಕರಿಗೆ ಮಾನವೀಯ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಬೇಕು ಎಂದು ಕೋರಿ ಹರ್ಷ ಮಂದಾರ್ ಹಾಗೂ ಕಾರ್ಣಿಕಾ ಸೌಹ್ನಿ ಅವರು ಪಿಐಎಲ್ ಸಲ್ಲಿಸಿದ್ದರು. ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಬೇಕು ಎಂದು ಕೋರಿದ್ದರು. ‘ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆ’ಯನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry