ಜಮ್ಮುವಿನಲ್ಲಿ ಕಾರ್ಯಾಚರಣೆ ಸ್ಥಗಿತಕ್ಕೆ ಸೂಚನೆ

7

ಜಮ್ಮುವಿನಲ್ಲಿ ಕಾರ್ಯಾಚರಣೆ ಸ್ಥಗಿತಕ್ಕೆ ಸೂಚನೆ

Published:
Updated:

ನವದೆಹಲಿ : ಪವಿತ್ರ ರಂಜಾನ್ ಮಾಸ ಆರಂಭವಾಗುವ ಕಾರಣ ಒಂದು ತಿಂಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಸದಂತೆ ಭದ್ರತಾ ಪಡೆಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.

ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ನೆರವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹಸಚಿವಾಲಯ ತಿಳಿಸಿದೆ.

ಆದರೆ ದಾಳಿ ನಡೆದಾಗ ಪ್ರತಿದಾಳಿ ನಡೆಸಲು ಅಥವಾ ಅಮಾಯಕ ಜೀವಗಳಿಗೆ ಆಪತ್ತು ಎದುರಾದಾಗ ಪ್ರತಿರೋಧ ತೋರಲು ಸೇನೆಗೆ ಅಧಿಕಾರ ಇದೆ.

ಈ ನಿರ್ಧಾರವನ್ನು ಎಲ್ಲರೂ ಗೌರವಿಸುವ ಮೂಲಕ ಮುಸ್ಲಿಂ ಸಹೋದರ, ಸಹೋದರಿಯರು ಯಾವುದೇ ಅಡ್ಡಿಯಿಲ್ಲದೆ ರಂಜಾನ್ ಆಚರಿಸಲು ನೆರವಾಗಬೇಕು ಎಂದು ಸಚಿವಾಲಯದ ವಕ್ತಾರರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry