‘ಬಿಜೆಪಿ ಶಾಸಕರಿಂದ ಅಭಿವೃದ್ಧಿಗೆ ಗಮನ’

7

‘ಬಿಜೆಪಿ ಶಾಸಕರಿಂದ ಅಭಿವೃದ್ಧಿಗೆ ಗಮನ’

Published:
Updated:

ಸಿದ್ದಾಪುರ: ‘ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆಲುವು ಪಡೆದಿದ್ದು, ಗೆದ್ದ ಶಾಸಕರು ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ’ ಎಂದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹೇಳಿದರು.

‘ಪಕ್ಷದೊಳಗೆ ಅಲ್ಪ ಗೊಂದಲ ಉಂಟಾಗಿದ್ದರಿಂದ ಎರಡು ಕ್ಷೇತ್ರಗಳಲ್ಲಿ ಸೋಲಾಗಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರರ ಗೆಲುವು ಅವರ ಹಿರಿತನಕ್ಕೆ ಒಪ್ಪುವ ಗೆಲುವು ಅಲ್ಲ. ಹಳಿಯಾಳ ಕ್ಷೇತ್ರದಲ್ಲಿ ದೇಶಪಾಂಡೆ ಅವರ ಅತ್ಯಲ್ಪ ಮತದ ಗೆಲುವು ನೈಜ ಗೆಲುವಲ್ಲ. ಪಕ್ಷದಿಂದ ಆಯ್ಕೆಯಾದವರು ಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry