ಆನ್‌ಲೈನ್‌ ವ್ಯವಸ್ಥೆ ಬರಲಿ

7

ಆನ್‌ಲೈನ್‌ ವ್ಯವಸ್ಥೆ ಬರಲಿ

Published:
Updated:

ಹಣಕಾಸು ವ್ಯವಹಾರವೂ ಸೇರಿದಂತೆ ಅನೇಕ ಮಹತ್ವದ ಕೆಲಸಗಳನ್ನು ಈಗ ಆನ್‌ಲೈನ್‌ನಲ್ಲೇ ಮಾಡಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್‌ ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ. ಇದರಿಂದ ಜನರಿಗೆ ಸಮಯದ ಉಳಿತಾಯವೂ ಆಗುತ್ತದೆ. ಹೀಗಿರುವಾಗ ಮತದಾನಕ್ಕೂ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಯಾಕೆ ಚಿಂತನೆ ನಡೆಸಬಾರದು?

ನಮ್ಮಲ್ಲಿ ಹಲವರ ಹೆಸರು ತಮ್ಮ ಹುಟ್ಟೂರಿನ ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿರುತ್ತದೆ. ಆದರೆ ಅವರು ಉದ್ಯೋಗಾರ್ಥ ಬೇರೆ ಊರಿನಲ್ಲಿ ನೆಲೆಸಿರುತ್ತಾರೆ. ಇಂಥವರಲ್ಲಿ ಕೆಲವರು ಹಣ ಖರ್ಚು ಮಾಡಿಯಾದರೂ ಊರಿಗೆ ಬಂದು ಮತ ಚಲಾಯಿಸಿ ಹೋಗುತ್ತಾರೆ. ಆದರೆ ಎಲ್ಲರೂ ಮತದಾನಕ್ಕಾಗಿ ತಮ್ಮ ಜೇಬಿನಿಂದ ಹಣ ಖರ್ಚು ಮಾಡಲು ಸಿದ್ಧರಿರುವುದಿಲ್ಲ. ಆನ್‌ಲೈನ್‌ ಮತದಾನದ ವ್ಯವಸ್ಥೆ ಬಂದರೆ ಎಲ್ಲರೂ ಹಣವನ್ನು ವೆಚ್ಚ ಮಾಡದೆಯೇ ತಮ್ಮ ಹಕ್ಕು ಚಲಾಯಿಸಬಹುದು. ಸಮಯ, ಹಣದ ಉಳಿತಾಯದ ಜೊತೆಗೆ ಮತದಾನ ಪ್ರಮಾಣವೂ ಇದರಿಂದ ಹೆಚ್ಚುವುದು.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿಯಾಗುವುದೆಂದು ಆಶಿಸಬಹುದೇ?

ಅನಂತ ಕಲ್ಲಾಪುರ, ತೀರ್ಥಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry