ಸಿಡ್ನಿ (ಎಎಫ್‌ಪಿ): ಚೆಂಡು ವಿರೂಪ ಪ್ರಕರಣದಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧ ಶಿಕ್ಷೆಗೊಳಗಾಗಿದ್ದ ಡೇವಿಡ್ ವಾರ್ನರ್ ಅವರು ಇಲ್ಲಿನ ರೆಂಡ್‌ವಿಕ್ ಪೀಟರ್‌ಶ್ಯಾಮ್ ಕ್ಲಬ್‌ನಲ್ಲಿ ಆಡಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್, ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಹಾಗೂ ಮತ್ತೊಬ್ಬ ಆಟಗಾರರಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರು ಸಿಕ್ಕಿಬಿದ್ದಿದ್ದರು. ಸ್ಮಿತ್ ಮತ್ತು ವಾರ್ನರ್ ಅವರಿಗೆ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಶಿಕ್ಷೆ ನೀಡಲಾಗಿತ್ತು.

‘ಕ್ಲಬ್‌ನ ಪದಾಧಿಕಾರಿಗಳೊಂದಿಗೆ ವಾರ್ನರ್ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಮೂರು ಪಂದ್ಯಗಳಲ್ಲಿ ಆಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ರೆಂಡ್‌ವಿಕ್ ಪೀಟರ್‌ಶ್ಯಾಮ್ ಕ್ಲಬ್‌ನ ಅಧ್ಯಕ್ಷ ಮೈಕ್ ವಿಟ್ನಿ ಹೇಳಿದ್ದಾರೆ.

‘ನಮ್ಮ ಕ್ಲಬ್‌ನಲ್ಲಿ ಅವರು ಆಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಯುವ ಆಟಗಾರರು ಅವ ರೊಂದಿಗೆ ಅಂಗಳಕ್ಕಿಳಿಯಲು ಉತ್ಸುಕರಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ರಾಫ್ಟ್ ಅವರಿಗೆ ವೆಸ್ಟರ್ನ್ ಆಸ್ಟ್ರೇಲಿಯಾದ ಕ್ಲಬ್‌ನಲ್ಲಿ ಆಡಲು ಕೆಲವು ದಿನಗಳ ಹಿಂದೆ ಅವಕಾಶ ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.