ಗೆಲುವಿನ ಅಂತರಕ್ಕಿಂತಲೂ ‘ನೋಟಾ’ ಹೆಚ್ಚು!

7

ಗೆಲುವಿನ ಅಂತರಕ್ಕಿಂತಲೂ ‘ನೋಟಾ’ ಹೆಚ್ಚು!

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 3.22 ಲಕ್ಷ ಮತದಾರರು ನೋಟಾ (ಮೇಲಿನ ಯಾರೂ ಅಲ್ಲ) ಚಲಾವಣೆ  ಮಾಡಿದ್ದಾರೆ. ಒಟ್ಟಾರೆ ದಾಖಲಾದ ಮತದಾನ ಪ್ರಮಾಣದಲ್ಲಿ ನೋಟಾ ಪಾಲು ಶೇ 0.9ರಷ್ಟು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 2.57 ಲಕ್ಷ ನೋಟಾ ಚಲಾವಣೆ ಆಗಿತ್ತು.

ಚುನಾವಣಾ ಆಯೋಗ ನೀಡಿರುವ ದಾಖಲೆಗಳ ಪ್ರಕಾರ, ಬಹುಜನ ಸಮಾಜ ಪಕ್ಷ  (ಬಿಎಸ್‌ಪಿ) ಹಾಗೂ ಸಿಪಿಎಂ ಸೇರಿದಂತೆ ಕೆಲ ಪಕ್ಷಗಳು ಪಡೆದ ಮತಕ್ಕಿಂತ ನೋಟಾ ಮತವೇ ಹೆಚ್ಚಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 15,829 ನೋಟಾ ಮತಗಳು ಚಲಾವಣೆ ಆಗಿದ್ದು, ಅತಿಹೆಚ್ಚು ನೋಟಾ ಪಡೆದ ಕ್ಷೇತ್ರವಾಗಿ ದಾಖಲೆ ಬರೆದಿದೆ. ಬಿಜೆಪಿಯ ಎಂ. ಕೃಷ್ಣಪ್ಪ, ಕಾಂಗ್ರೆಸ್‌ನ ಆರ್‌.ಕೆ.ರಮೇಶ್‌, ಜೆಡಿಎಸ್‌ನ ಆರ್‌.ಪ್ರಭಾಕರ ರೆಡ್ಡಿ ಇಲ್ಲಿ ಅಭ್ಯರ್ಥಿಗಳಾಗಿದ್ದರು. ರಾಜಧಾನಿಯಲ್ಲಿ ಒಟ್ಟು 63,639 ಜನ ನೋಟಾ ಗುಂಡಿ ಒತ್ತಿದ್ದಾರೆ.

ಬಾದಾಮಿ, ಗದಗ, ಹಿರೇಕೆರೂರು, ಕುಂದಗೋಳ, ಮಸ್ಕಿ, ಆಳಂದ ಹಾಗೂ ಪಾವಗಡ ಸೇರಿದಂತೆ ಒಂಬತ್ತು ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಿವೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಬಿ.ಶ್ರೀರಾಮುಲು ವಿರುದ್ಧ 1,696 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ 2,007 ನೋಟಾ ಮತಗಳು ಚಲಾವಣೆ ಆಗಿವೆ.

ಅಪರಾಧ ಹಿನ್ನೆಲೆ ಹೊಂದಿದ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದ ‘ರೆಡ್‌ ಅಲರ್ಟ್‌’ ಪ್ರದೇಶಗಳಲ್ಲಿ ಹೆಚ್ಚಿನ ನೋಟಾ ಚಲಾವಣೆ ಆಗಿವೆ ಎಂದು ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ಹೇಳಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry