ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಚರ್ಚ್ ಮೇಲೆ ದಾಳಿ, 10 ವರ್ಷ ಹಿಂದಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

7

ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಚರ್ಚ್ ಮೇಲೆ ದಾಳಿ, 10 ವರ್ಷ ಹಿಂದಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

Published:
Updated:
ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಚರ್ಚ್ ಮೇಲೆ ದಾಳಿ, 10 ವರ್ಷ ಹಿಂದಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

ಬೆಂಗಳೂರು: ಮಂಗಳೂರಿನ ಚರ್ಚ್ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿ/ಆರ್‌ಎಸ್‌ಎಸ್ ಸಂಭ್ರಮಾಚರಣೆ ಮಾಡಿದೆ. ದಾಳಿ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮದವರು ಅಲ್ಲಿದ್ದರೂ ಸುದ್ದಿವಾಹಿನಿಗಳು ಇದನ್ನು ಪ್ರಸಾರ ಮಾಡಿಲ್ಲ ಎಂಬ ಅಡಿಬರಹವಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ 10 ವರ್ಷ ಹಿಂದಿನದ್ದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ

ಈ ವಿಡಿಯೊ @New_Shahbazkhan  ಎಂಬ ಟ್ವಿಟರ್ ಖಾತೆಯಲ್ಲಿ ಮತ್ತು Muslim-Pro ಎಂಬ  ಫೇಸ್‍ಬುಕ್ ಪುಟದಲ್ಲಿ ಶೇರ್ ಆಗಿದೆ. ಟ್ವಿಟರ್ ಮತ್ತು ಫೇಸ್‍ಬುಕ್ ವಿಡಿಯೊಗಳ ಹೊರತಾಗಿ ಯೂಟ್ಯೂಬ್‍ನಲ್ಲಿಯೂ 2 ದಿನಗಳ ಹಿಂದೆ ವಿಡಿಯೊ ಶೇರ್ ಆಗಿತ್ತು.

ನಿಜ ಸಂಗತಿ ಏನು?
2008ರಲ್ಲಿ ಮಂಗಳೂರಿನ ಪೆರ್ಮನ್ನೂರ್‍‍ನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಮೇಲೆ ದಾಳಿ ನಡೆದಿತ್ತು. ಅಲ್ ಜಜೀರಾ ಸುದ್ದಿ ಮಾಧ್ಯಮವು ಈ ಪ್ರಕರಣವನ್ನು ಅಕ್ಟೋಬರ್ 5, 2008ರಂದು ವರದಿ ಮಾಡಿದ್ದು, Daijiworld.com  ಸೆಪ್ಟೆಂಬರ್ 15, 2008ರಂದು ವರದಿ ಮಾಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಾಗ ಈ ದಾಳಿ ನಡೆಸಿದ್ದು ಬಜರಂಗದಳದ ಕಾರ್ಯಕರ್ತರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry