ಕಾಬೂಲ್‌: 16 ಪೊಲೀಸರ ಸಾವು, 37 ಉಗ್ರರ ಹತ್ಯೆ

7

ಕಾಬೂಲ್‌: 16 ಪೊಲೀಸರ ಸಾವು, 37 ಉಗ್ರರ ಹತ್ಯೆ

Published:
Updated:

ಕಾಬೂಲ್: ತಾಲಿಬಾನ್ ಉಗ್ರರು ಮೂರು ಸ್ಥಳಗಳಲ್ಲಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ 16 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿದ್ದು, ಭದ್ರತಾ ಪಡೆ ನಡೆಸಿದ ಪ್ರತಿ ದಾಳಿಯಲ್ಲಿ 37 ಉಗ್ರರು ಹತರಾಗಿದ್ದಾರೆ.

ಅಜ್ರಿಸ್ತಾನ್ ಜಿಲ್ಲೆಯ ಘಜ್ನಿ ಪ್ರಾಂತ್ಯದಲ್ಲಿ ಕಳೆದ ರಾತ್ರಿ ಉಗ್ರರು ಭದ್ರತಾ ಪಡೆಯನ್ನು ಗುರಿಯಾಗಿಸಿ ದಾಳಿ ನಡೆಸಿದಾಗ ಒಂಬತ್ತು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡರು. ಆಗ ಭದ್ರತಾಪಡೆ ಪ್ರತಿ ದಾಳಿ ಮಾಡಿದಾಗ 25 ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಉಪ ಪೊಲೀಸ್ ಮುಖ್ಯಸ್ಥ ರಮದಾನ್ ಅಲಿ ಮೂಸೆನಿ ಹೇಳಿದ್ದಾರೆ.

ಮತ್ತೊಂದೆಡೆ ಮರ್ಫಿ ಜಿಲ್ಲೆಯ ಕಂದಹಾರ್ ಪ್ರದೇಶದಲ್ಲೂ ಉಗ್ರರು ದಾಳಿ ನಡೆಸಿದ್ದು, ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.  12 ತಾಲಿಬಾನಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರ ವಕ್ತಾರ ಜಿಯಾ ದುರಾನಿ ತಿಳಿಸಿದ್ದಾರೆ.

ನೈರುತ್ಯ ಉರ್ಜಾನ್‌ನಲ್ಲಿ ಉಗ್ರರ ದಾಳಿಗೆ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry