ಸಿಂಗಪುರದ ಚಿಂತಕರ ಚಾವಡಿಗೆ ಸಿ.ರಾಜಮೋಹನ್

7

ಸಿಂಗಪುರದ ಚಿಂತಕರ ಚಾವಡಿಗೆ ಸಿ.ರಾಜಮೋಹನ್

Published:
Updated:

ಸಿಂಗಪುರ: ಸಿಂಗಪುರದ ಚಿಂತಕ ಚಾವಡಿ ಎನಿಸಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ (ಐಎಸ್‌ಎಎಸ್‌) ನಿರ್ದೇಶಕರಾಗಿ ವಿದೇಶಾಂಗ ನೀತಿಗಳ ವಿಶ್ಲೇಷಕ, ಶಿಕ್ಷಣ ತಜ್ಞ ಭಾರತದ ಸಿ.ರಾಜಮೋಹನ್ ನೇಮಕಗೊಂಡಿದ್ದಾರೆ.

ಮೇ 21ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೋಹನ್‌ ಅವರು ಐಎಸ್‌ಎಎಸ್‌ನಲ್ಲಿ 2012ರಿಂದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ದೆಹಲಿಯ ಜೆಎನ್‌ಯುನಲ್ಲಿ ಪ್ರಾಧ್ಯಾಪಕರಾಗಿದ್ದರು. ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಕೂಡ ಆಗಿದ್ದರು.

‘ನಿರ್ದೇಶಕ ಸ್ಥಾನ ನಿರ್ವಹಿಸಲು ರಾಜಮೋಹನ್ ಎಲ್ಲ ರೀತಿಯ ಅರ್ಹತೆಗಳನ್ನು ಹೊಂದಿದ್ದಾರೆ. ಅವರ ಅನುಭವ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಐಎಸ್‌ಎಎಸ್‌ ರಾಯಭಾರಿ ಗೋಪಿನಾಥ್ ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry