ಬುಧವಾರ, ಮಾರ್ಚ್ 3, 2021
25 °C

ಸೂಪರ್‌ ಕಿಂಗ್ಸ್‌ ಮಣಿಸಿದ ಡೆಲ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಸೂಪರ್‌ ಕಿಂಗ್ಸ್‌ ಮಣಿಸಿದ ಡೆಲ್ಲಿ

ನವದೆಹಲಿ : ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌ (20ಕ್ಕೆ2) ಮತ್ತು ಅಮಿತ್ ಮಿಶ್ರಾ (20ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ 34ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಶ್ರೇಯಸ್‌ ಅಯ್ಯರ್‌ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಸಿಎಸ್‌ಕೆ 6 ವಿಕೆಟ್‌ಗೆ 128ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ತಂಡ ಪೃಥ್ವಿ ಶಾ (17; 17ಎ, 1ಬೌಂ, 1ಸಿ) ವಿಕೆಟ್‌ ಬೇಗನೆ ಕಳೆದುಕೊಂಡಿತು. ನಾಯಕ ಶ್ರೇಯಸ್‌ (19; 22ಎ, 3ಬೌಂ) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ (5) ಕೂಡ ಮಂಕಾದರು. ನಂತರ ರಿಷಭ್‌ ಪಂತ್‌ (38; 26ಎ, 3ಬೌಂ, 2ಸಿ) ಮತ್ತು ವಿಜಯ ಶಂಕರ್‌ (ಔಟಾಗದೆ 36; 28ಎ, 2ಬೌಂ, 2ಸಿ) ದಿಟ್ಟ ಆಟ ಆಡಿದರು. ರಿಷಭ್‌ ಔಟಾದ ನಂತರ ಹರ್ಷಲ್‌ ಪಟೇಲ್‌ (ಔಟಾಗದೆ 36; 16ಎ, 1ಬೌಂ, 4ಸಿ) ಅಬ್ಬರಿಸಿದರು. ಹೀಗಾಗಿ ತಂಡದ ಮೊತ್ತ ಹೆಚ್ಚಿತು.

ಚೆನ್ನೈ ಪರ ಅಂಬಟಿ ರಾಯುಡು (50; 29ಎ, 4ಬೌಂ, 4ಸಿ) ಮಿಂಚಿದರು. ಆದರೆ ಇತರ ಆಟಗಾರರು ದೊಡ್ಡ ಮೊತ್ತ ಗಳಿಸಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಡೆಲ್ಲಿ ಡೇರ್‌ಡೆವಿಲ್ಸ್‌, 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 (ಪೃಥ್ವಿ ಶಾ 17, ಶ್ರೇಯಸ್‌ ಅಯ್ಯರ್‌ 19, ರಿಷಭ್‌ ಪಂತ್‌ 38, ವಿಜಯ ಶಂಕರ್‌ ಔಟಾಗದೆ 36, ಹರ್ಷಲ್‌ ಪಟೇಲ್‌ ಔಟಾಗದೆ 36; ಲುಂಗಿ ಗಿಡಿ 14ಕ್ಕೆ2, ರವೀಂದ್ರ ಜಡೇಜ 19ಕ್ಕೆ1).

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 128 (ಅಂಬಟಿ ರಾಯುಡು 50, ಸುರೇಶ್‌ ರೈನಾ 15, ಮಹೇಂದ್ರ ಸಿಂಗ್‌ ದೋನಿ 17, ರವೀಂದ್ರ ಜಡೇಜ ಔಟಾಗದೆ 27; ಟ್ರೆಂಟ್‌ ಬೌಲ್ಟ್‌ 20ಕ್ಕೆ2, ಅಮಿತ್‌ ಮಿಶ್ರಾ 20ಕ್ಕೆ2). ಫಲಿತಾಂಶ: ಡೇರ್‌ಡೆವಿಲ್ಸ್‌ಗೆ 34ರನ್‌ ಗೆಲುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.