ಸೀರೆ ಒಣಗಿಸುವುದು...

7
ರಾಜು ಹೆಗಡೆ

ಸೀರೆ ಒಣಗಿಸುವುದು...

Published:
Updated:
ಸೀರೆ ಒಣಗಿಸುವುದು...

ಸೀರೆ ಒಣಗಿಸುವುದು

ಪ್ಯಾಂಟು ಒಣಗಿಸಿದಂತೆ

ಅಲ್ಲ

ಚಡ್ಡಿ, ಬನಿಯನ್ನು, ಪಂಚೆ

ಯಾವುದನ್ನು ಒಣಗಿಸಿದಂತೆಯೂ ಅಲ್ಲ

 

ಒಣಗಿಸುವ ಮೊದಲು

ಕೈಲಿ ತೊಳೆದದ್ದೊ ಮೆಷಿನ್ನಿಗೆ ಹಾಕಿದ್ದೊ

ಗೊತ್ತಿರಬೇಕು.

ನಂತರ,

ಅದರ ತುದಿ ಬುಡವನ್ನು ಅಥವ

ಬುಡ ತುದಿಯನ್ನು ತಿಳಿಯಬೇಕು

ಮುಂದೆ,

ಒಂದು ತುದಿಯನ್ನು ಅಥವ

ಬುಡವನ್ನು ಹೆಗಲ ಮೇಲೆ ಇಟ್ಟು

ಮತ್ತೊಂದು ಬುಡ ಅಥವ

ತುದಿಯನ್ನು ಸರಗೆಯ ಮೇಲೆ

ಹರಗಬೇಕು

ಆಮೇಲೆ ಉಳಿದದ್ದನ್ನು.

 

ಅದು ನಾಲ್ಕು ಪದರಾಗುತ್ತದೆ

ಚತುರ್ವಿಧ ಪುರುಷಾರ್ಥದಂತೆ!

ಹೀಗೆ ಮಾಡುವಾಗ

ಒಂದೆಡೆ ಹಿಡಿದು

ಕ್ಲಿಪ್ಪು ಹಾಕದಿದ್ದರೆ

ನೋಡುನೋಡುತ್ತಿರುವಂತೆ

ಭೂಮಿತಾಯಿ ಮಡಿಲನ್ನು

ಸೇರುತ್ತದೆ ಸೀರೆ!

ಆಗ ನಾವು

ಮತ್ತೆ ಮೊದಲಿನಿಂದ

ಶುರು ಮಾಡಬೇಕಾಗುತ್ತದೆ.

ನೆನಪಿರಲಿ

ಸೀರೆ ಆರುವುದೂ

ಒದ್ದೆಯಾಗುವುದೂ ಬೇಗ.

ಜೊತೆಗೆ,

ಬೇರೆ ಬೇರೆ ಸೀರೆ

ಬೇರೆ ಬೇರೆಯಾಗಿರಬಹುದು.

ಹೀಗಾಗಿ

ಸೀರೆ ಒಣಗಿಸುವುದು...

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry