ವಿಮಾನಪತನ: 107 ಮಂದಿ ಸಾವು

7
ಕ್ಯೂಬಾದ ಹವಾನಾದಲ್ಲಿ ಭೀಕರ ಅಪಘಾತ* ಹಾರಾಟ ಆರಂಭದ ವೇಳೆಯೇ ಅವಘಡ

ವಿಮಾನಪತನ: 107 ಮಂದಿ ಸಾವು

Published:
Updated:
ವಿಮಾನಪತನ: 107 ಮಂದಿ ಸಾವು

ಹವಾನಾ,ಕ್ಯೂಬಾ: ಇಲ್ಲಿನ ಜೋಸ್‌ ಮಾರ್ಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 110 ಮಂದಿಯನ್ನು ಕರೆದೊಯ್ಯುತ್ತಿದ್ದ ಬೋಯಿಂಗ್‌ 737 ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿ 107 ಮಂದಿ ಸಾವನ್ನಪ್ಪಿದ್ದಾರೆ.  ದುರಂತದಲ್ಲಿ ಮೂವರು ಬದುಕುಳಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಕ್ಯೂಬಾದ ಮಾಧ್ಯಮಗಳು ವರದಿ ಮಾಡಿವೆ.

ಕ್ಯೂಬಾದ ಪೂರ್ವಭಾಗದ ಹೋಲ್ಗುಯಿನ್‌ಗೆ ತೆರಳುತ್ತಿದ್ದ ಈ ವಿಮಾನವು ರನ್‌ವೇ ಮುಂಭಾಗದಲ್ಲಿನ ಹೊಲದಲ್ಲಿ ಸ್ಫೋಟಗೊಂಡಿದೆ. ತಕ್ಷಣವೇ ನಿಲ್ದಾಣದಲ್ಲಿದ್ದ ಅಗ್ನಿಶಾಮಕ ದಳ ನೆರವಿಗೆ ಧಾವಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ವಿಮಾನದಲ್ಲಿದ್ದ ಪೈಕಿ 100 ಮಂದಿ ಕ್ಯೂಬಾಗೆ ಸೇರಿದವರಾಗಿದ್ದು, ಉಳಿದ ಐದು ಮಂದಿ ವಿದೇಶಿಯರು.

ಕಾರಣ ಗೊತ್ತಾಗಿಲ್ಲ: ‘ರನ್‌ವೇನಿಂದ ವಿಮಾನ ಟೇಕಾಫ್‌ ಆಗುವ ವೇಳೆ ಏಕಾಏಕಿ ಬಲಭಾಗಕ್ಕೆ ವಾಲತೊಡಗಿ, ನಂತರ ಸ್ಫೋಟಗೊಂಡಿತು ಸೂಕ್ತ ತನಿಖೆ ಬಳಿಕವಷ್ಟೇ ಅಪಘಾತದ ಕಾರಣ ತಿಳಿದುಬರಲಿದೆ.’ ಎಂದು ಕ್ಯೂಬಾನಾ ಏವಿಯೇಷನ್‌ ಸಂಸ್ಥೆ ತಿಳಿಸಿದೆ.

ಕ್ಯೂಬಾದಲ್ಲಿ ಭೀಕರ ವಿಮಾನ ಅಪಘಾತಗಳು

*2010: ಅರ್ಟೆಮಿಸಾದಲ್ಲಿ ಸೇನಾ ವಿಮಾನ ಪತನ, 8 ಸೈನಿಕರ ಸಾವು

2010: ಏರೋ ಕೆರಿಬಿಯನ್‌ ವಿಮಾನ ಪತನ: 68 ಸಾವು

*1989:ಹವಾನಾಕ್ಕೆ ಬರುತ್ತಿದ್ದ ವಿಮಾನ ಪತನ, 126 ಸಾವು

*

ಅಮೆರಿಕ ಕಾನೂನಿನ ಅನ್ವಯ, ತನಿಖೆಗೆ ಯಾವುದೇ ರೀತಿಯ ನೆರವು ನೀಡಲು ಸಂಸ್ಥೆ ಸಿದ್ಧವಿದೆ.

-ಬೋಯಿಂಗ್‌ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry