7
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಲೆಕ್ಕಾಚಾರ

ಶಾಮನೂರು ಕೈ ಹಿಡಿದ ಮಂಡಕ್ಕಿಭಟ್ಟಿ

Published:
Updated:
ಶಾಮನೂರು ಕೈ ಹಿಡಿದ ಮಂಡಕ್ಕಿಭಟ್ಟಿ

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರನ್ನು ಪ್ರಮುಖವಾಗಿ ಮಂಡಕ್ಕಿಭಟ್ಟಿ ಲೇಔಟ್, ಬಾಷಾ ನಗರ, ಅಹಮದ್‌ ನಗರದ ಮತದಾರರು ಕೈ ಹಿಡಿದಿದ್ದಾರೆ. ಆದರೆ, ಗ್ರಾಮಾಂತರ ಪ್ರದೇಶದ ಜನ ಶಾಮನೂರಿಗೆ ಕೈ ಕೊಟ್ಟಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಮನೂರು, ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಅವರಿಗಿಂತ 15,884 ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸಿದ್ದಾರೆ.

ದಾವಣಗೆರೆ ನಗರದ ಒಟ್ಟು 1ರಿಂದ17 ಮತ್ತು 22ನೇ ವಾರ್ಡ್‌ ವ್ಯಾಪ್ತಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು 8 ವಾರ್ಡ್‌ಗಳಲ್ಲಿ ಹೆಚ್ಚುವರಿ ಮತ ಪಡೆದಿದ್ದರೆ, ಬಿಜೆಪಿಯ ಯಶವಂತರಾವ್‌ ಜಾಧವ್‌ ಕೂಡ ಅಷ್ಟೇ ಸಂಖ್ಯೆಯ ವಾರ್ಡಿನಲ್ಲಿ ಹೆಚ್ಚುವರಿ ಮತ ಪಡೆದು ಸಮಬಲ ತೋರಿಸಿದ್ದಾರೆ. ಆದರೆ, ಹೆಚ್ಚುವರಿ ಮತಗಳ ಸಂಖ್ಯೆ ಹೆಚ್ಚು–ಕಡಿಮೆ ಇದೆ.

ಕುರುಬರಕೇರಿಯಲ್ಲಿ ಜಾಧವ್‌ಗೆ ಹೆಚ್ಚು ಮತ:

ನಗರ ಪ್ರದೇಶದ ಮಂಡಕ್ಕಿ ಭಟ್ಟಿ ಲೇಔಟ್‌ನಲ್ಲಿ 6,489, ಬಾಷಾ ನಗರದಲ್ಲಿ 5,182, ಅಜಾದ್‌ ನಗರದಲ್ಲಿ 4,394 ಹೆಚ್ಚುವರಿ ಮತಗಳನ್ನು ಶಾಮನೂರು ಪಡೆದರೆ, ಕುರುಬರಕೇರಿಯಲ್ಲಿ ಯಶವಂತರಾವ್‌ ಜಾಧವ್, ಶಾಮನೂರುಗಿಂತ 2,957 ಹೆಚ್ಚುವರಿ ಮತಗಳನ್ನು ಪಡೆದಿದ್ದಾರೆ. ಅದೇ ರೀತಿ ಗಣೇಶ್ ಪೇಟೆಯಲ್ಲಿ 1,963, ಮಂಡಿಪೇಟೆಯಲ್ಲಿ 1,156, ಕೆ.ಬಿ. ಬಡಾವಣೆಯಲ್ಲಿ 1,120 ಮತಗಳನ್ನು ಹೆಚ್ಚುವರಿ ಜಾಧವ್‌ ಪಡೆದಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲೂ ಜಾಧವ್‌ ಮುಂದೆ

ಜಾಧವ್‌ ಗ್ರಾಮಾಂತರ ಪ್ರದೇಶದಲ್ಲೂ ಶಾಮನೂರುಗಿಂತ ಮುಂದೆ ಇದ್ದಾರೆ. ಹಳ್ಳಿಗಳಲ್ಲಿ ಒಟ್ಟು 1,660 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ಶಾಮನೂರು 1,7531 ಮತಗಳಿಂದ ಜಾಧವ್‌ಗಿಂತ ಮುಂದಿದ್ದಾರೆ.

ಅಂಚೆ ಮತದಲ್ಲಿ ಶಾಮನೂರು ಮುಂದೆಒಟ್ಟು 405 ಅಂಚೆ ಮತದಲ್ಲಿ 202 ಶಾಮನೂರು ಅವರಿಗೆ, 189 ಜಾಧವ್‌ಗೆ, ಜೆಡಿಎಸ್‌ನ ಅಮಾನುಲ್ಲಾ ಖಾನ್‌ಗೆ 13 ಹಾಗೂ ಇತರೆ 1 ಮತ ಪಡೆದಿದ್ದಾರೆ. ಶಾಮನೂರು ಇದರಲ್ಲಿ 13 ಮತಗಳ ಮುನ್ನಡೆ ಕಂಡಿದ್ದಾರೆ.

ಮತ ಎಣಿಕೆ ಸಂದರ್ಭದಲ್ಲಿ ಪ್ರಥಮ ಮೂರು ಸುತ್ತುಗಳಲ್ಲಿ ಜಾಧವ್ ಅವರೇ ಮುಂದಿದ್ದರು. ಇದು ಕೆಲವು ಕ್ಷಣಗಳ ಕಾಲ ಕಾಂಗ್ರೆಸ್‌ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಆದರೆ ನಾಲ್ಕನೇ ಸುತ್ತಿನಲ್ಲಿ 15 ಸಾವಿರಕ್ಕೂ ಹೆಚ್ಚು ಅಂತರದ ಮತ

ಗಳು ಶಾಮನೂರಿಗೆ ಬಂದವು. ನಂತರದ ಸುತ್ತುಗಳಲ್ಲಿ ಅವರೇ ಮುನ್ನಡೆ ಸಾಧಿಸಿ, ಗೆಲುವು ಸಾಧಿಸಿದ್ದರು.

ಕುಸಿದ ಅಂತರ

2013ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಶಾಮನೂರು 66,320 ಮತ ಪಡೆದಿದ್ದರು. ಎದುರಾಳಿ ಜೆಡಿಎಸ್‌ನ ಸೈಯದ್ ಸೈಫುಲ್ಲ ಅವರಿಗಿಂತ 40,158 ಮತಗಳ ಅಂತರದಿಂದ ಅವರು ವಿಜಯಿಯಾಗಿದ್ದರು. ಒಂದೇ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 40,158ರಿಂದ 15,884ಕ್ಕೆ ಕುಸಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry