ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆ

7
ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುವರ್ಣಾ ಹೇಳಿಕೆ

ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆ

Published:
Updated:

ಮೈಸೂರು: ಸಮರ್ಪಕ ಚಿಕಿತ್ಸೆಯಿಂದ ಕ್ಷಯರೋಗ (ಟಿಬಿ) ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಮೈಸೂರು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಸುವರ್ಣಾ ತಿಳಿಸಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಶನಿವಾರ ಏರ್ಪಡಿಸಿದ್ದ ಕ್ಷಯರೋಗದ ಬಗ್ಗೆ ಅರಿವು ಮತ್ತು ಆರ್‌ಎನ್‌ಟಿಸಿಪಿ ಕಪ್ ಕ್ರಿಕೆಟ್ ಟೂರ್ನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷಯರೋಗ ಗುಣಪಡಿಸಬಹು ದಾದ ಕಾಯಿಲೆ. ಅದಕ್ಕೆ ದೀರ್ಘಾ ವಧಿಯ ಚಿಕಿತ್ಸೆ ಅಗತ್ಯ. ಕೆಲವರು ಅರಿವಿನ ಕೊರತೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಅರ್ಧದಷ್ಟು ಚಿಕಿತ್ಸೆ ಪಡೆದು ಸುಮ್ಮನಾಗುತ್ತಾರೆ. ಇದರಿಂದ ತೀವ್ರ ಕಾಯಿಲೆ ಸಂಭವಿಸಬಹುದು. ರೋಗದ ಲಕ್ಷಣ ಉಳ್ಳವರು ಸುಮಾರು 6 ತಿಂಗಳ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅರಿವಿನ ಕೊರತೆಯಿಂದ ದೇಶದಲ್ಲಿ ಕ್ಷಯ ರೋಗದ ಪ್ರಮಾಣ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮೀಕ್ಷೆ ಪ್ರಕಾರ ವಿಶ್ವಮಟ್ಟದಲ್ಲಿ 9.5 ದಶಲಕ್ಷ ಟಿಬಿ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ 2.2 ದಶಲಕ್ಷ ನ್‌ ಅಂದರೆ ವಿಶ್ವದ ಕಾಲು ಭಾಗದಷ್ಟು ರೋಗಿಗಳಿದ್ದಾರೆ. ಕರ್ನಾಟಕದಲ್ಲಿ 60,000ಕ್ಕೂ ಹೆಚ್ಚಿದ್ದರೆ, ಮೈಸೂರಿನಲ್ಲಿ 4,000 ರೋಗಿಗಳಿದ್ದಾರೆ. ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿ ಯಾದ ರೋಗಿಗಳ ಸಂಖ್ಯೆ. ನೋಂದಣಿ ಯಾಗದವರನ್ನು ಗುರುತಿಸಿದರೆ ಪ್ರಮಾಣ ಹೆಚ್ಚುತ್ತದೆ ಎಂದು ತಿಳಿಸಿದರು.

ರೋಗದ ಹರಡುವಿಕೆ ನಿಯಂತ್ರಣಕ್ಕೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಸಮುದಾಯದ ಮಟ್ಟದಲ್ಲಿ ರೋಗದ ಲಕ್ಷಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಬೇಕು. ಸಿಬ್ಬಂದಿಯಲ್ಲಿ ಸಂಘಟನೆಯ ಕೊರತೆಯಿದೆ. ಪ್ರತಿಯೊಬ್ಬರೂ ಇದನ್ನು ವೈಯಕ್ತಿಕ ವಿಚಾರವಾಗಿ ಪರಿಗಣಿಸಿ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ– ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಪಶು ಪತಿ, ನಂಜನಗೂಡು ತಾಲ್ಲೂಕು ವೈದ್ಯಾ ಧಿಕಾರಿ ಡಾ.ಕಲಾವತಿ, ಎಚ್.ಡಿ.ಕೋಟೆ ತಾಲ್ಲೂಕು ವೈದ್ಯಾಧಿಕಾರಿ ರವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry