ನನೆಗುದಿಗೆ ಬಿದ್ದ ತರಕಾರಿ ಮಾರುಕಟ್ಟೆ ಕಟ್ಟಡ

7
ತಿ.ನರಸೀಪುರ ಪುರಸಭೆ ವತಿಯಿಂದ ನಿರ್ಮಿಸಿದ ಮಳಿಗೆ

ನನೆಗುದಿಗೆ ಬಿದ್ದ ತರಕಾರಿ ಮಾರುಕಟ್ಟೆ ಕಟ್ಟಡ

Published:
Updated:
ನನೆಗುದಿಗೆ ಬಿದ್ದ ತರಕಾರಿ ಮಾರುಕಟ್ಟೆ ಕಟ್ಟಡ

ತಿ.ನರಸೀಪುರ: ಪುರಸಭೆ ವತಿಯಿಂದ ಪಟ್ಟಣದ ಲಿಂಕ್ ರಸ್ತೆಯ ಪಕ್ಕದಲ್ಲಿ ₹1.38 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಇನ್ನೂ ವ್ಯಾಪಾರಸ್ಥರ ಬಳಕೆಗೆ ದೊರಕದೆ ನನೆಗುದಿಗೆ ಬಿದ್ದಿದೆ.

ಅನೇಕ ವರ್ಷಗಳಿಂದ ಪಟ್ಟಣದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಿಗಳಿಗೆ ಒಂದು ಸ್ಥಳದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪುರಸಭೆಯು 2013-14 ಹಾಗೂ 14-15ನೇ ಸಾಲಿನಲ್ಲಿ ರಾಜ್ಯ ಹಣಕಾಸು ನಿಧಿಯಿಂದ ತರಕಾರಿ ಮಾರುಕಟ್ಟೆ ನಿರ್ಮಾಣವಾಗಿದೆ.

₹1.38 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ತರಕಾರಿ ಮಾರುಕಟ್ಟೆ ಉದ್ದೇಶ ಇನ್ನೂ ಈಡೇರಿಲ್ಲ. ವ್ಯಾಪಾರಸ್ಥರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಮಾರುಕಟ್ಟೆ ಮಳಿಗೆಗಳನ್ನು ಹಂಚಿಕೆ ಮಾಡಬೇಕಾದ ಪುರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮವಹಿಸುತ್ತಿಲ್ಲ ಎಂದು ದೂರುತ್ತಾರೆ ವ್ಯಾಪಾರಸ್ಥರು.

ಕಟ್ಟಡದ ಪಕ್ಕದಲ್ಲಿರುವ ನಿವೇಶನದಲ್ಲಿ ತರಕಾರಿ ವ್ಯಾಪಾರದ ಅಂಗಡಿಗಳಿದ್ದು, ಮಳೆ ಬಂದರೆ ವ್ಯಾಪಾರಸ್ಥರಿಗೆ ಯಾವುದೇ ಮೂಲಸೌಲಭ್ಯಗಳಿಲ್ಲ. ಪಟ್ಟಣದ ಮಾಂಸದ ಮಾರುಕಟ್ಟೆಗೂ ಸೂಕ್ತ ಸೌಲಭ್ಯ ಇಲ್ಲದ ಕಾರಣ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡಲ್ಲಿ ಆ ಸ್ಥಳದಲ್ಲಿ ಸುಸಜ್ಜಿತ ಮೀನು ಹಾಗೂ ಮಾಂಸದ ಅಂಗಡಿಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬಹುದು ಎಂಬುದು ನಾಗರಿಕರ ಆಗ್ರಹವಾಗಿದೆ.

ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಕಟ್ಟಡ ಉದ್ಘಾಟನೆ ಮಾಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಅನುದಾನ ಬಳಕೆಯ ಉದ್ದೇಶವೂ ಈಡೇರಿದಂತಾಗುವುದಿಲ್ಲ ಎಂದು ಸ್ಥಳಿಯರು ಆರೋಪಿಸುತ್ತಾರೆ.

ತರಕಾರಿ ಮಾರುಕಟ್ಟೆ ಮಳಿಗೆಗಳ ಹಂಚಿಕೆ ಬಗ್ಗೆ ಹಿಂದಿನ ಸಭೆಗಳಲ್ಲಿ ಚರ್ಚೆ ನಡೆದಿತ್ತು. ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಪುರಸಭೆ ಅಧ್ಯಕ್ಷ ಉಮೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry