ಎಲ್ಲರಿಗೂ ಗೊತ್ತಿರುವುದನ್ನೇ ಬರೆದಿದ್ದೇನೆ: ಶಿವರಾಮ ಹೆಬ್ಬಾರ

7

ಎಲ್ಲರಿಗೂ ಗೊತ್ತಿರುವುದನ್ನೇ ಬರೆದಿದ್ದೇನೆ: ಶಿವರಾಮ ಹೆಬ್ಬಾರ

Published:
Updated:
ಎಲ್ಲರಿಗೂ ಗೊತ್ತಿರುವುದನ್ನೇ ಬರೆದಿದ್ದೇನೆ: ಶಿವರಾಮ ಹೆಬ್ಬಾರ

ಕಾರವಾರ: ‘ಹೌದು, ಫೇಸ್‌ಬುಕ್‌ನಲ್ಲಿ ನಾನು ಪೋಸ್ಟ್ ಹಾಕಿದ್ದೇನೆ. ಅದು ತಪ್ಪು, ಸುಳ್ಳು ಅಂತ ಯಾರು ಹೇಳಿದ್ದಾರೆ? ಎಲ್ಲ ಗೊತ್ತಿದ್ದಿದ್ದನ್ನೇ ಬರೆದಿದ್ದೇನಲ್ಲ ನಾನು’ ಎಂದು ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕರು, ಹೆಬ್ಬಾರರ ಫೇಸ್‌ಬುಕ್ ಪೋಸ್ಟ್ ಫೇಕ್. ಅದು ಅವರದ್ದಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ’ ಎಂದು ಕೇಳಿದಾಗ ಅವರು ಹೀಗೆ ಹೇಳಿದರು.

‘ನಾನು ಮಾಡಿದ ಪೋಸ್ಟ್ ಫೇಕ್ ಅಂತ ನಮ್ಮ ನಾಯಕರು ಹೇಳಿದಾರಾ? ಅವರು ಹಾಗೆ ಹೇಳಿರಲಿಕ್ಕಿಲ್ಲ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಶಿವರಾಮ ಹೆಬ್ಬಾರ ಅವರ ಪತ್ನಿ ವನಜಾಕ್ಷಿ ಅವರಿಗೆ ಬಿಜೆಪಿ ಮುಖಂಡರು ಕರೆ ಮಾಡಿ ಶಾಸಕರು ಬಿಜೆಪಿ ಸೇರುವಂತೆ ಆಮಿಷವೊಡ್ಡಿದ್ದರು ಎಂದು ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಅದಕ್ಕೆ ಸಂಬಂಧಿಸಿದ ಆಡಿಯೊ ಬಿಡುಗಡೆ ಮಾಡಿದ್ದರು. ಆದರೆ, ತಮ್ಮ ಪತ್ನಿಯನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೆಬ್ಬಾರ ಅವರು ಫೇಸ್‌ಬುಕ್‌ನ ತಮ್ಮ ಪುಟದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ...

ಆಡಿಯೊ: ಪುಟ್ಟಸ್ವಾಮಿ, ವಿಜಯೇಂದ್ರ ಧ್ವನಿಯಲ್ಲವೆಂದು ಸಾಬೀತಾದರೆ ರಾಜಕೀಯ ನಿವೃತ್ತಿ –ವಿ.ಎಸ್ ಉಗ್ರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry